ಉಡುಪಿ: ಕುಂದಾಪುರದ ಕಾಲೇಜೊಂದರಲ್ಲಿ ಶುರುವಾದ ಹಿಜಬ್ ಗೊಂದಲ ಇದೀಗ ರಾಜ್ಯದೆಲ್ಲೆಡೆ ಹರಡಿದೆ. ಅಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ ಈ ಸುದ್ದಿ, ಸದ್ಯಕ್ಕೆ ಕೋರ್ಟ್ ಅಂಗಳದಲ್ಲಿದೆ. ಇದೆಲ್ಲದರ ನಡುವೆ ಬೆಳಗ್ಗೆಯಿಂದಲೂ ಫೋಟೋವೊಂದು ಎಲ್ಲರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೆಲವು ಕಾಲೇಜುಗಳಲ್ಲಿ ಹಿಜಾಬ್ ಇಲ್ಲದೆ ನಾವೂ ಬರಲ್ಲ ಅಂತಿದ್ದಾರೆ. ಪರೀಕ್ಷೆ ವೇಳೆಯಲ್ಲಿ ಗೊಂದಲ ಮಾಡಿಕೊಂಡು ಕುಳಿತಿದ್ದಾರೆ. ಅದೆಷ್ಟೋ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ. ಈ ಬೆನ್ನಲ್ಲೆ ಹಿಂದೂ ವಿದ್ಯಾರ್ಥಿನಿಯರು ಆ ಕಡೆ ಈ ಕಡೆ ನಿಂತು ಮಧ್ಯೆ ಮುಸ್ಲಿಂ ವಿದ್ಯಾರ್ಥಿನಿಯನ್ನ ಕರೆದುಕೊಂಡು ಬರ್ತಾ ಇರೋ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಶಾಲೆಯಲ್ಲಿ ಯಾರು ಯಾವ ಧರ್ಮವನ್ನು ನೋಡಲ್ಲ. ಸ್ನೇಹಿತರಾದರೆ ಎಲ್ಲರೂ ಒಂದೇ. ಅದೇ ಸಾಮರಸ್ಯದ ಬದುಕು ಎಂಬುದುನ್ನ ಉಡುಪಿ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ. ಉಡುಪಿ ಮಹಿಳಾ ಕಾಲೇಜಿನಲ್ಲಿ ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು, ಸಾಮರಸ್ಯದ ಬದುಕಿನ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ಫ್ರೆಂಡ್ಶಿಪ್ ಗೆ ಬೇಷ್ ಎಂದಿದ್ದು, ಎಲ್ಲೆಡೆ ಈ ಫೋಟೋ ಶೇರ್ ಆಗುತ್ತಿದೆ.