ಬೆಂಗಳೂರು: ಈ ವರ್ಷದ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಬೇಕು ಎಂಬ ವಿಚಾರ ಚರ್ಚೆಯಲ್ಲಿದೆ. ಈ ಬಗ್ಗೆ ಪರ ವಿರೋಧಗಳ ಚರ್ಚೆ ಶುರುವಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಎಇ ಕೆ ಶಿವಕುಮಾರ್ ಮಾತನಾಡಿ, ಎಲ್ಲವೂ ಇರುವಾಗ ಮತ್ತೆ ಏನು ಸೇರಿಸಬೇಕು ಎಂದು ಪ್ರಶ್ನಿಸಿದ್ದಾರೆ.
ವಿಧನಾಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಇದೆ. ಈಗ ಹೊಸತೇನು ಸೇರಿಸುವುದು. ಎಲ್ಲರು ಕೂಡ ವಿದ್ಯಾವಂತರು, ಬುದ್ಧಿವಂತರಾಗಿದ್ದಾರೆ. ಎಲ್ಲಾ ಧರ್ಮದ ಆಚಾರ ವಿಚಾರ ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ.
ಈಗಾಗಲೇ ಇದೆ ರಾಮಾಯಣ ಇದೆ, ಭಗವದ್ಗೀತೆ ಇದೆ. ಈಗೇನು ಹೊಸದಾಗಿ ವೈಭೀಕರಿಸುವ ಅವಶ್ಯಕತೆ ಇಲ್ಲ. ಹನುಮಂತಯ್ಯ ಅವರು ಸಿಎಂ ಆಗಿದ್ದಾಗ ಎರಡು ರೂಪಾಯಿಗರ ಭಗವದ್ಗೀತೆ ಪುಸ್ತಕ ಹಂಚಿದ್ದರು. ಈಗೇನು ಅವರು ಮಾಡಿದ್ದೀವಿ ಅಂತ ಕ್ರೆಡಿಟ್ ತಗೊಳೋ ಅವಶ್ಯಕತೆ ಇಲ್ಲ ಎಂದು ಗರಂ ಆಗಿದ್ದಾರೆ.