ಮೈಸೂರು: ದಲಿತರಿಗೆ ಸಿಎಂ ಸ್ಥಾನ ಕೊಡಿ ಅನ್ನೋ ಕೂಗು ಹೊಸದೇನಲ್ಲ. ಆದ್ರೆ ಆ ಕೂಗು ಆಗಾಗ ಮರೆಯಾಗುತ್ತಿರುತ್ತೆ, ಆಗಾಗ ಕೇಳಿಸ್ತಾ ಇರುತ್ತೆ. ಇದೀಗ ದಲಿತ ಸಿಎಂ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ನಾನು ದಲಿತನೇ ಎಂದಿದ್ದಾರೆ.
ಜಿಲ್ಲೆಯ ಹಿನೆಕಲ್ ನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅಲ್ಲಿ ಮಾತನಾಡಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮಾತ್ರ ದಲಿತರಲ್ಲ. ತುಳಿತಕ್ಕೊಳಗಾದವರು ದಲಿತರೇ. ಹೀಗಾಗಿ ನಾನು ಒಬ್ಬ ದಲಿತನೇ. ಯಾಕಂದ್ರೆ ನಾನು ಕೂಡ ತುಳಿತಕ್ಕೊಳಗಾಗಿದ್ದೇನೆ ಎಂದಿದ್ದಾರೆ.
ದಲಿತರು ಸಿಎಂ ಆದ್ರೆ ನನ್ನದೇನು ತಕರಾರಿಲ್ಲ. ತಳ ಸಮುದಾಯದ ಜನ ಜಾಗೃತರಾಗದೆ ಹೋದರೆ ಬದಲಾವಣೆ ಕಷ್ಟವಾಗುತ್ತೆ. ಹೊಟ್ಟೆ ಪಾಡಿಗಾಗಿ ದಲಿತರು ಬಿಜೆಪಿ ಸೇರ್ತಾರೆ ಅನ್ನೊ ನನ್ನ ಭಾಷಣವನ್ನ ತಿರುಚಿದ್ರು. ಆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಯಾಕಂದ್ರೆ ನಾನು ಒಬ್ಬ ದಲಿತನೆ.
ಕಾಂಗ್ರೆಸ್ನಲ್ಲಿ ಯಾರು ಸಿಎಂ ಆಗ್ಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುತ್ತೆ. ಶಾಸಕರು ಸೂಚಿಸುವವರನ್ನೇ ಹೈಕಮಾಂಡ್ ಸಿಎಂ ಮಾಡುತ್ತೆ. ದಲಿತರು ಸಿಎಂ ಆದ್ರೆ ನಾನು ಖಂಡಿತ ಸ್ವಾಗತಿಸುತ್ತೇನೆ.
ನಾನು ಐದು ವರ್ಷ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಅಧಿಕಾರ ಸಿಕ್ಕ ಕೂಡಲೇ ಎಸ್ಸಿಪಿ, ಟಿಎಸ್ಪಿ ಅಭಿವೃದ್ಧಿಗೆ ಹಣ ಮೀಸಲಿಟ್ಟೆ. ಈ ಮಿಂಚಿನ ಸರ್ಕಾರಗಳು ಯಾವು ಜನಸಂಖ್ಯೆ ಆಧಾರವಾಗಿ ಹಣ ಮೀಸಲಿಟ್ಟಿರಲಿಲ್ಲ.