ಪರಿಶಿಷ್ಟ ಜಾತಿ ಒಳ ಮೀಸಲಾತಿ : ಸಮೀಕ್ಷಾ ಕಾರ್ಯ ಅವಧಿ ಮರು ವಿಸ್ತರಣೆ

1 Min Read
ಚಿತ್ರದುರ್ಗ. ಜೂ.03 : ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನಿವೃತ್ತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ನಡೆದಿರುವ ಸಮೀಕ್ಷೆ ಕಾರ್ಯದ ಅವಧಿಯನ್ನು ಜೂನ್ 08 ರವರೆಗೆ ಮರು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಕಾರ್ಯ ಕಳೆದ ಮೇ 05 ರಿಂದ ಆರಂಭಗೊಂಡಿದ್ದು, ಕಾರ್ಯದರ್ಶಿಗಳು, ಏಕ ಸದಸ್ಯ ಆಯೋಗ, ಬೆಂಗಳೂರು ಅವರ ಆದೇಶದಂತೆ ಸಮೀಕ್ಷಾ ಕಾರ್ಯವನ್ನು ಜೂನ್ 8 ರವರೆಗೆ ಕೈಗೊಳ್ಳಲು ಮರು ವಿಸ್ತರಿಸಲಾಗಿದೆ.
ಪರಿಷ್ಕøತ ವೇಳಾಪಟ್ಟಿಯಂತೆ ಎರಡನೆ ಹಂತದಲ್ಲಿ, ಸಮೀಕ್ಷೆ ಬ್ಲಾಕ್‍ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು, ಮನೆ-ಮನೆ ಭೇಟಿ ಅವಧಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಜೂನ್ 08 ರವರೆಗೆ ಜರುಗಲಿದ್ದು, ಮೂರನೆ ಹಂತದಲ್ಲಿ ಸ್ವಯಂ ಘೋಷಣೆ ಮಾಡಿ, ಆನ್‍ಲೈನ್ ಮೂಲಕ ಸಮೀಕ್ಷೆ ಕಾರ್ಯವು ಕೂಡ ಜೂನ್ 08 ರವರೆಗೆ ಜರುಗಲಿದೆ.
ಪರಿಷ್ಕøತ ವೇಳಾಪಟ್ಟಿಯನ್ವಯ ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಕುಟುಂಬದ ಸಂಪೂರ್ಣ ಮಾಹಿತಿ ನೀಡಿ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು  ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಕೋರಿದ್ದಾರೆ.
Share This Article
Leave a Comment

Leave a Reply

Your email address will not be published. Required fields are marked *