Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ಕಾಂತಾರ’ ಬೆಡಗಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಮಹಾಮೋಸ..!

---Advertisement---

ಬೆಂಗಳೂರು: ವಂಚನೆ ಮಾಡುವವರು ಸಿಕ್ಕ ದಾರಿಯಲ್ಲಿ ಸುಲಭವಾಗಿ ವಂಚಿಸಿ ಬಿಡುತ್ತಾರೆ. ಆ ಕಲೆಯನ್ನ ಅದೇಗೆ ರೂಢಿಸಿಕೊಂಡಿರುತ್ತಾರೋ ಹೇಗೋ. ಯಾಕಂದ್ರೆ ಸಾಮಾನ್ಯರ ಹೆಸರಲ್ಲ ಸೆಲೆಬ್ರೆಟಿಗಳು, ರಾಜಕಾರಣಿಗಳ ಹೆಸರೇಳಿಕೊಂಡೆ ವಂಚನೆ ಮಾಡಿ ಬಿಡುತ್ತಾರೆ. ದೊಡ್ಡವರ ಹೆಸರೇಳಿದಾಗ ಯಾವುದೋ ನಿರೀಕ್ಷೆಯಲ್ಲಿದ್ದವರು ಯಾಮಾರೋದು ಸಹಜವೇ ತಾನೇ. ಇದೀಗ ಕಾಂತಾರ ಬೆಡಗಿ ರುಕ್ಮಿಣಿ ವಸಂತ್ ಹೆಸರೇಳಿಕೊಂಡು ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ನಟಿ ರುಕ್ಮಿಣಿ ವಸಂತ್ ಅವರೇ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. 9445893273 ಎಂಬ ಮೊಬೈಲ್ ಸಂಖ್ಯೆಯನ್ನು ಬಳಸುವ ವ್ಯಕ್ತಿಯೊಬ್ಬರು ನಾನು ಅಂತ ನಟಿಸಿ, ಸುಳ್ಳು ನೆಪ ಹೇಳಿ ಹಲವರನ್ನು ಸಂಪರ್ಕ ಮಾಡ್ತಾ ಇದ್ದಾರೆ. ಇದು ನನ್ನ ಗಮನಕ್ಕೂ ಬಂದಿದೆ. ಈ ಸಂಖ್ಯೆ ನನಗೆ ಸೇರಿಲ್ಲ. ಮತ್ತೆ ಈ ನಂಬರ್ ನಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣವಾಗಿ ಫೇಕ್ ಆಗಿರುತ್ತದೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ಮಾತಾನಾಡೋದಕ್ಕೆ ಹೋಗ್ಬೇಡಿ. ಈ ಕೃತ್ಯ ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತೆ..

ಹೀಗಾಗಿ ಇಂತಹ ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ. ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹಣ ವಸೂಲಿ ಮಾಡುವುದಕ್ಕೆ ಕೆಲವೊಂದಿಷ್ಟು ಕಿಲಾಡಿಗಳು ಈ ರೀತಿಯ ವಂಚನೆ ಮಾಡುತ್ತಾರೆ. ನಂಬುವವರು ಇರುವ ತನಕ ಎಷ್ಟಾಗುತ್ತೋ ಅಷ್ಟು ವಸೂಲಿ ಮಾಡುವ ಪ್ಲ್ಯಾನ್ ಅವರದ್ದು. ಹೀಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...