ನವದೆಹಲಿ: ಇಡಿ ನಿರ್ದೇಶಕ ಸಂಜಯ್ ಮಿಶ್ರಾಗೆ ಕೇಂದ್ರ ಸರ್ಕಾರ ಸೇವಾವಧಿಯನ್ನು ಮುಂದುವರೆಸಿತ್ತು. ಈ ಸಂಬಂಧ ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದೆ. ಸೇವಾವಧಿ ವಿಸ್ತರಣೆ ಮಾಡಿರುವುದು ಅಕ್ರಮ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಕಳೆದ ವರ್ಷ ನೀಡಿದ್ದ ಸೇವಾವಧಿ ಕಾನೂನು ಬಾಹಿರವಾಗಿದೆ ಎಂದು ತೀರ್ಪು ನೀಡಿದೆ.
ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಮುಜುಗರವಾಗಿದೆ. ಇಡಿ ಅಂದ್ರೆ ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಗಳಲ್ಲಿ ಒಂದು. ಇದು ಆರ್ಥಿಕ ಕಾನೂನುಗಳನ್ನು ಜಾರಿ ಮಾಡುವ ಹಾಗೂ ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವಂತೆ ಕರ್ತವ್ಯ ನಿರ್ವಹಿಸುತ್ತದೆ.
ಕೇಂದ್ರ ಸರ್ಕಾರ ಇಡಿ ನಿರ್ದೇಶಕರಾಗಿದ್ದ ಸಂಜಯ್ ಮಿಶ್ರಾಗೆ ಸೇವಾವಧಿಯನ್ನು ವಿಸ್ತರಣೆ ಮಾಡಿತ್ತು. ಕಳೆದ ವರ್ಷ ನೀಡಿದ್ದ ಸೇವಾವಧಿ ಕಾನೂನು ಬಾಹಿರ. ಮೂರನೇ ಸೇವಾವಧಿ ವಿಸ್ತರಣೆ ತಪ್ಪು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಜುಲೈ 31ರವರೆಗೂ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ನೀಡಿದೆ. ಈ ಮೂಲಕ ಸುಪ್ರೀಂ ಕೋರ್ಟ್ ಇನ್ನು 15 ದಿನದ ಒಳಗಾಗಿ ನೂತನ ಇಡಿ ನಿರ್ದೇಶಕರನ್ನು ನೇಮಕ ಮಾಡಬೇಕಿದೆ.