ಬೆಂಗಳೂರು; ಬೇರೆ ದೇಶ, ಬೇರೆ ರಾಜ್ಯಗಳಿಂದ ಬಂದವರೇ ಬೆಂಗಳೂರಿನಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಅದರಲ್ಲೂ ಬ್ಯಾಂಕ್ ಗಳಲ್ಲೂ ಬೇರೆ ಬೇರೆ ರಾಜ್ಯದಿಂದ ಬಂದವರೇ ಮ್ಯಾನೇಜರ್ ಪೋಸ್ಟ್ ಸೇರಿದಂತೆ ದೊಡ್ಡ ಹುದ್ದೆಯಲ್ಲಿದ್ದಾರೆ. ಎಷ್ಟೇ ವರ್ಷ ಕರ್ನಾಟಕದಲ್ಲಿ ಇದ್ರು ಕೂಡ ಕನ್ನಡ ಕಲಿಯುವ ಉಸಾಬರಿಗೆ ಹೋಗ್ತಾ ಇಲ್ಲ. ಕನ್ನಡ ಕಲಿಯುವುದಿರಲಿ, ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಗೌರವಯುತವಾಗಿ ಮಾತು ಆಡಲ್ಲ. ಆ ಸೌಜನ್ಯವೇ ಇಲ್ಲದವರ ವಿರುದ್ಧ ಕನ್ನಡಿಗರು ತಿರುಗಿ ಬಿದ್ದಿದ್ದಾರೆ.
ಆನೇಕಲ್‌ನ SBI ಬ್ಯಾಂಕ್ ನಲ್ಲೂ ಇಂಥದ್ದೇ ಒಂದು ಅಹಂಕಾರವನ್ನ ಪ್ರದರ್ಶನ ಮಾಡಿದ್ದಾರೆ. ಆನೇಕಲ್ ತಾಲೂಕಿನ ಸೂರ್ಯ ನಗರದಲ್ಲಿ ಎಸ್ಬಿಐ ಬ್ಯಾಂಕ್ ಮ್ಯಾನೇಜರ್, ಕನ್ನಡ ಮಾತನಾಡಿ ಎಂದರೂ ಮಾತನಾಡಲ್ಲ ಎಂದು ದರ್ಪ ತೋರಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಕನ್ನಡಪರ ಸಂಘಟನೆ ಕೆರಳಿದೆ. ವಿರೋಧ ವ್ಯಕ್ಯವಾಗುತ್ತಿದ್ದಂತೆ ಕ್ಷಮೆ ಕೇಳಿರುವ ಮಹಿಳಾ ಮ್ಯಾನೇಜರ್, ಏನೋ ಕಾಟಾಚಾರಕ್ಕೆ ಕೇಳಿದಂತೆ ಇದೆ. ಹೀಗಾಗಿ ಮತ್ತಷ್ಟು ಆಗ್ರಹ ಮಾಡಿದೆ.
ಸೂರ್ಯ ನಗರ ಬ್ಯಾಂಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರವೇ, ಮ್ಯಾನೇಜರ್ ಸರಿಯಾದ ರೀತಿಯಲ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಪತ್ರ ಬರೆಯುವ ಮೂಲಕ ಕ್ಷಮೆ ಕೇಳಬೇಕು, ಜೊತೆಗೆ ಅವರನ್ನ ಈ ಬ್ರ್ಯಾಂಚ್ ನಿಂದ ವಜಾ ಮಾಡಬೇಕು ಎಂದೇ ಆಗ್ರಹ ಮಾಡಿದ್ದಾರೆ. ಕರ್ನಾಟಕದಲ್ಲಿದ್ದು, ಕನ್ನಡ ಮಾತನಾಡಲ್ಲ ಎಂದು ಹೇಳುವವರಿಗೆ ಕನ್ನಡಪರ ಸಂಘಟನೆಗಳು ಸರಿಯಾದ ರೀತಿಯಲ್ಲಿಯೇ ಉತ್ತರ ನೀಡುತ್ತಿದ್ದಾರೆ. ಇನ್ನೊಮ್ಮೆ ಕನ್ನಡ ಮಾತನಾಡಲ್ಲ ಏನೀವಾಗ ಅನ್ನೋರಿಗೆ ಇದೆಲ್ಲ ಪಾಠವೇ ಸರಿ.
