ಸೋಷಿಯಲ್ ಮೀಡಿಯಾದಲ್ಲೆಲ್ಲಾ ಬಂಡೀಪುರ ಉಳಿಸಿ ಅಭಿಯಾನ : ಆ ಒಂದು ಯೋಜನೆಯೇ ಇದಕ್ಕೆಲ್ಲ ಕಾರಣ..!

1 Min Read

ಮೈಸೂರು: ಸೋಷಿಯಲ್ ಮೀಡಿಯಾ ತೆಗೆದು ನೋಡಿದರೆ ಸಾಕು ಬಂಡೀಪುರ ಅರಣ್ಯ ಪ್ರದೇಶವನ್ನು ಉಳಿಸಿ ಎಂಬ ಅಭಿಯಾನದ ಪೋಸ್ಟರ್ ಕಾಣಿಸುತ್ತಿದೆ. ಪರಿಸರ ಪ್ರೇಮಿಗಳಿಂದ ಸೇವ್ ಬಂಡೀಪುರ ಎಂಬ ಅಭಿಯಾನ ಆರಂಭವಾಗಿದೆ. ಸರ್ಕಾರ ರೈಲ್ವೆ ಯೋಜನೆಯನ್ನೇನಾದರೂ ಕೈಗೆತ್ತಿಕೊಂಡರೆ ಪ್ರಾಣಿಗಳಿಗೆ ತೊಂದರೆಯಾಗಲಿದೆ ಎಂದು ಅಭಿಯಾನ ಶುರು ಮಾಡಿದ್ದಾರೆ.

ಕೇರಳದಿಂದ ಕರ್ನಾಟಕಕ್ಕೆ ರೈಲು ಮಾರ್ಗ ಕಲ್ಪಿಸುವ ಯೋಜನೆಯನ್ನು ರೂಪುಗೊಳಿಸುವ ಫ್ಲ್ಯಾನ್ ನಡೆಯುತ್ತಿದೆ. ಕೇರಳ ರಾಜ್ಯದ ನೀಲಾಂಬೂರು ಮತ್ತು ಕರ್ನಾಟಕದ ನಂಜನಗೂಡಿಗೆ ರೈಲು ಮಾರ್ಗ ಕಲ್ಪಿಸಲಾಗುತ್ತಿದೆ. ವಯನಾಡಿನ ಮೂಲಕ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ನೀಲಂಬೂರು – ನಂಜನಗೂಡು ರೈಲ್ವೆ ಯೋಜನೆಗೆ ಅಂತಿಮ ಹಂತದ ವರದಿಯಾಗಿದೆ. ವರದಿ ಸಿದ್ಧಪಡಿಸಲು ವೈಮಾನಿಕ ಸಮೀಕ್ಷೆಯೂ ಪೂರ್ಣಗೊಂಡಿದೆ. ಈ ಯೋಜನೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಡನ್ನು ನಾಶ ಮಾಡಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬೇಡ ಎಂದಿದ್ದಾರೆ.

ಇನ್ನು ಇತ್ತಿಚೆಗಷ್ಟೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೇರಳ ಸರ್ಕಾರದ ಮನವಿಯನ್ನು ಪುರಸ್ಕರಿಸುವ ಸುಳಿವನ್ನು ನೀಡಿದ್ದಾರೆ. ಬಂಡೀಪುರ ಅರಣ್ಯ ಪ್ರದೇಶದ ಒಳಗೆ ರಾತ್ರಿ ಸಂಚಾರದ ನಿಷೇಧವನ್ನು ಸಡಿಲಗೊಳಿಸುವ ಸುಳಿವನ್ನು ನೀಡಿದ್ದರು. ಇದರಿಂದ ಪ್ರಾಣಿಗಳಿಗೆ ತೊಂದರೆ. ಮೊದಲೇ ಎಷ್ಟೋ ಜಾತಿಯ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಹೀಗಿರುವಾಗಲೂ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಂಡೀಪುರ ಅರಣ್ಯ ಪ್ರದೇಶವನ್ನು ಉಳಿಸಿ ಎಂಬ ಅಭಿಯಾನವನ್ನು ಶುರಿ ಮಾಡಿಕೊಂಡಿರುವ ಪರಿಸರ ಪ್ರೇಮಿಗಳು, ಕಾಡನ್ನು ನಾಶ .ಅಡುವ ಯೋಜನೆ ಬೇಡ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *