ಮುಂಬೈ: ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಇದೀಗ ಸಾವರ್ಕರ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದು, ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲದೆ, ಗಾಂಧಿ ಕೊಲ್ಲಲು ಗೋಡ್ಸೆಗೆ ಸಹಾಯ ಮಾಡಿದ್ದರು ಎಂದು ಆರೋಪಿಸಿದ್ದಾರೆ.
Savarkar not only helped the British, he also helped Nathuram Godse find an efficient gun to murder Bapu. Till two days before Bapu’s Murder, Godse did not have a reliable weapon to carry out the murder of M. K. Gandhi.
— Tushar GANDHI (@TusharG) November 19, 2022
ಇತ್ತಿಚೆಗೆ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿತ್ತು. ಈ ಬೆನ್ನಲ್ಲೇ ತುಷಾರ್ ಗಾಂಧಿ ಅವರು ಟ್ವೀಟ್ ಮಾಡಿದ್ದು, ಬಾಪು ಅವರನ್ನು ಕೊಲ್ಲುವುದಕ್ಕೆ ನಾಥುರಾಂ ಗೋಡ್ಸೆಗೆ ಸಮರ್ಪಕವಾಗಿ ಬಂದೂಕು ಸಿಗುವಂತೆ ನೋಡಿಕೊಂಡಿದ್ದು ಸಾವರ್ಕರ್. ಬಾಪು ಅವರ ಹತ್ಯೆಗೂ ಎರಡು ದಿನ ಮುಂಚೆ ಗೋಡ್ಸೆ ಬಳಿ ಯಾವುದೇ ರೀತಿಯ ಸಮರ್ಪಕವಾದ ಬಂದೂಕು ಇರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಬಗ್ಗೆ ಮಾತನಾಡಿರುವ ತುಷಾರ್ ಗಾಂಧಿ, ನಾನು ಯಾರ ಬಗ್ಗೆಯೂ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸರು ಹಾಕಿರುವ ಎಫ್ಐಆರ್ ಪ್ರಕಾರ, ನಾಥೂರಾಮ್ ಗೂಡ್ಸೆ ಹಾಗೂ ಸಾವರ್ಕರ್ ಅವರು 1948ರ ಜನವರಿ 26, 27 ರಂದು ಭೇಟಿಯಾಗಿದ್ದರು. ಈ ಭೇಟಿಗೂ ಮುನ್ನ ಅವರ ಬಳಿ ಸರಿಯಾದ ಬಂದೂಕು ಇರಲಿಲ್ಲ. ಎಲ್ಲಾ ಕಡೆ ಬಂದೂಕಿಗಾಗಿ ಹುಡುಕಾಡುತ್ತಿದ್ದರು. ಭೇಟಿಯ ಬಳಿಕ ನೇರವಾಗಿ ದೆಹಲಿಗೆ ಹೋಗಿ ಅಲ್ಲಿಂದ ಗ್ವಾಲಿಯರ್ ಗೆ ಹೋದ ಮೇಲೆ ಬಂದೂಕು ಸಿಕ್ಕಿದೆ ಎಂದಿದ್ದಾರೆ.