ಕೊಪ್ಪಳ: ಬಸವರಾಜ್ ಬೊಮ್ಮಾಯಿ ಅವರು ಯಶಸ್ವಿಯಾಗಿ ಆರು ತಿಂಗಳು ಸಿಎಂ ಆಗಿ ಮುನ್ನಡೆಯುತ್ತಿದ್ದಾರೆ. ಆದ್ರೆ ಈ ಮಧ್ಯೆ ಸಿಎಂ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆದ್ರೆ ಇದೆಲ್ಲವನ್ನು ಬಿಜೆಪಿ ಹೈಕಮಾಂಡ್ ಮುಚ್ಚಿ ಹಾಕುತ್ತಲೇ ಬರುತ್ತಿದ್ದಾರೆ. ಇದೀಗ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಇದ್ದಕ್ಕಿದ್ದ ಹಾಗೇ ಸಿಎಂ ಬದಲಾವಣೆ ವಿಚಾರವನ್ನ ಮಾತನಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ನಮಗಿರುವ ಮಾಹಿತಿ ಪ್ರಕಾರ ಬಸವರಾಜ್ ಬೊಮ್ಮಾಯಿ ಅವರು ಆರು ತಿಂಗಳಿಗಷ್ಟೇ ಸಿಎಂ ಆಗಿರುವುದು. ಪ್ರಮಾಣ ವಚನ ಸ್ವೀಕರಿಸುವಾಗಲೇ ಆ ಬಗ್ಗೆ ಷರತ್ತು ಹಾಕಿದ್ದಾರೆ. ಬಿಜೆಪಿಯಲ್ಲಿ ಈ ಬಾರಿಯೂ ಮೂವರು ಸಿಎಂ ಗಳಾಗುವುದು ಖಚಿತ ಎಂದಿದ್ದಾರೆ.
ಬಿಜೆಪಿಯಲ್ಲೂ ಯಡಿಯೂರಪ್ಪ ಬಣ, ಆರ್ ಎಸ್ ಎಸ್ ಬಣ ಅಂತ ಎರಡೆರಡು ಇದೆ. ಎಲ್ಲಾ ಪಕ್ಷದಲ್ಲೂ ಗುಂಪುಗಳಿವೆ. ಆದ್ರೆ ನಮ್ಮ ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ಇರುವುದು ಕಾಂಗ್ರೆಸ್ ಬಣವಷ್ಟೇ. ನನ್ನನ್ನು ಬಿಟ್ಟು ನಮ್ಮಲ್ಲಿ 4-5 ಜನ ಸಿಎಂ ಆಗುವ ಸಾಮರ್ಥ್ಯವಿರುವ ನಾಯಕರಿದ್ದಾರೆ ಎಂದಿದ್ದಾರೆ.