ಬೆಳಗಾವಿ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆಯ ವಿಚಾರವೇ ಸಾಕಷ್ಟು ಚರ್ಚೆಯಾಗ್ತಾ ಇದೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೋಸ್ಕರ ಕಾಯ್ತಾ ಇದ್ರೆ, ಇತ್ತ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೂಡ ಕೇಳಿಸ್ತಾ ಇದೆ. ಅದರಲ್ಲೂ ಸತೀಶ್ ಜಾರಕಿಹೊಳಿ ಅವರನ್ನ ಭವಿಷ್ಯದ ಸಿಎಂ ಅಂತಾನೇ ಅಂತಿದ್ದಾರೆ. ಅದಕ್ಕೆ ಸತೀಶ್ ಜಾರಕಿಹೊಳಿ ಕೊಟ್ಟ ಉತ್ತರ ಹೀಗಿದೆ.
ಬೆಳಗಾವಿಯಲ್ಲಿ ಮಾತನ್ನಾಡಿದ ಸತೀಶ್ ಜಾರಕಿಹೊಳಿ, ಈಗಾಗಲೇ ನಿಮ್ಮ ಪ್ರಶ್ನೆಗಳಿಗೆ ಬೆಂಗಳೂರಿನಲ್ಲಿಯೇ ಉತ್ತರ ಸಿಕ್ಕಿದೆ. ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ಕಾದು ನೋಡೋಣಾ. ಭವಿಷ್ಯದಲ್ಲಿ ಆಗ್ತಾರೆ ಅಂತ ಹೇಳಿರೋದು ನಾಳೆ ಅಲ್ಲ ಎಂದಿದ್ದಾರೆ. ಬಹುತೇಕ ಸಚಿವರ್ಯಾರು ಕೆಲಸ ಮಾಡ್ತಾ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಒಂದು ಕಡೆ ಆಗುತ್ತೆ, ಕೆಲವೊಂದು ಕಡೆ ಆಗಿಲ್ಲ. ಕೆಲವೊಂದು ಕಡೆ ಬಸ್ ಕೊಟ್ಟಿದ್ದಾರೆ. ಸಿಟಿಗೆ ಕೂಡ ನೂರು ಬಸ್ ಕೊಡ್ತಾ ಇದ್ದಾರೆ. ಬೆಂಗಳೂರಿನಲ್ಲಿದ್ದರೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿರೋದಿಲ್ಲ ಇಲಾಖೆ. ಬೆಂಗಳೂರಿನಾದ್ಯಂತ ಮಾಡ್ತಾರೆ. ವಿಳಂಬ ಆಗ್ತಾ ಇರಬಹುದು ಅಷ್ಟೇ ಎಂದಿದ್ದಾರೆ.
ಒಳ ಮೀಸಲಾತಿ ಬಗ್ಗೆ ಮಾತನ್ನಾಡಿ, ಸದ್ಯಕ್ಕೆ ಒಳ ಮೀಸಲಾತಿ ಜಾರಿ ಇಲ್ಲ. ತಡೆ ಹಿಡಿದವರು ಯಾರು. ಕೋರ್ಟ್ ತಡೆ ಹಿಡಿದಿರೋದು. ನ್ಯಾಯಾಲಯದಲ್ಲಿ ಇರುವ ಕಾರಣ ತಡೆಹಿಡಿಯಲಾಗಿದೆ. ಮುಂದೆ ಅದು ಅಂತಿಮ ಆದೇಶ ಬಂದ ಮೇಲೆ ಏನಾಗುತ್ತೆ ಅನ್ನೋದನ್ನ ನೋಡೋಣಾ. ಪದೇ ಪದೇ ಖುರ್ಚಿಯದ್ದೇ ಮಾತನ್ನಾಡೋದು ಬೇಡ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಗುತ್ತಾ ಮುಂದೆ ಸಾಗಿದ್ದಾರೆ. ಈ ಖುರ್ಚಿ ಕಾದಾಟ 2028ರ ಎಲೆಕ್ಷನ್ ಬರುವ ತನಕ ಹಾಗೇ ಇರುತ್ತಾ ಎಂಬ ಅನುಮಾನವೂ ಎಲ್ಲರನ್ನ ಕಾಡ್ತಾ ಇದೆ.



