ಚಿತ್ರದುರ್ಗ, (ಮೇ.16) : ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ ಸಂಗೀತ ಶಿಕ್ಷಕ, ಸಾಹಿತಿ, ಗಾಯಕ ಹಾಗೂ ತಬಲಾ ವಾದಕ ಆರ್.ಸತೀಶಕುಮಾರ ಜಟ್ಟಿ(56) ಸೋಮವಾರ ಬೆಳ್ಳಗಿಜಾವ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ , ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸತೀಶಕುಮಾರ ಜಟ್ಟಿ ಅವರು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಸೇರಿದಂತೆ ನಾನಾ ಮಠಗಳು, ಸಂಘಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನಗಳನ್ನು ಪಡೆದಿದರು.
ಜಿಲ್ಲಾಡಳಿತದ ನಾನಾ ಕಾರ್ಯಕ್ರಮಗಳಲ್ಲಿ ನಾಡಗೀತೆ ರೈತ ಗೀತೆಗಳಿಗೆ ಧ್ವನಿಯಾಗಿದ್ದರು. ಬಾಪೂಜಿ ಸಮೂಹ ಸಂಸ್ಥೆಯಲ್ಲಿ ದಶಕಗಳ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ರಾಜಾದ್ಯಂತ ನೂರಾರು ಕಾರ್ಯಗಳಲ್ಲಿ ಗಾಯಕರಾಗಿ ತಬಲಾ ವಾದಕರಾಗಿ ಭಾಗವಹಿಸಿದರು. ಬಾಪೂಜಿ ಸಮೂಹ ಸಂಸ್ಥೆಯಲ್ಲಿ ದಶಕಗ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಬಾಪೂಜಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ಹಾಗೂ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಕಲಾವಿದರು ಮೃತರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ನೆರವೇರಿಸಲಾಯಿತಯ.