ಹುಬ್ಬಳ್ಳಿ : ಸರಳವಾಸ್ತು ಚಂದ್ರಶೇಖರ್ ಗುರೂಜಿಯವರನ್ನು ಹಾಡು ಹಗಲೇ ಚುಚ್ಚಿ ಚುಚ್ಚಿ ಕೊಲೆಗೈದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. 800 ಪುಟಗಳ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಚಾರ್ಜ್ ಶೀಟ್ ನಲ್ಲಿ ಗುರೂಜಿ ಸಾವಿಗೆ ಕಾರಣ ಏನು ಎಂಬುದನ್ನು ಮೆನ್ಶನ್ ಮಾಡಲಾಗಿದೆ.
ಗುರೂಜಿ ಅವರ ಅಣ್ಣನ ಮಕ್ಕಳನ್ನು ಕಚೇರಿಗೆ ಕರೆ ತಂದಿದ್ದೇ ಕೊಲೆ ಮಾಡುವುದಕ್ಕೆ ಕಾರಣವಾಯಿತಂತೆ. ಆರೋಪಿಗಳು ವಿಚಾರಣೆ ವೇಳೆ ಹೇಳಿದಂತೆ, ಚಂದ್ರಶೇಕರ್ ಗುರೂಜಿ ಕಂಪನಿಗೆ ಕಷ್ಟಪಟ್ಟು ದುಡಿದವರು ನಾವೂ. ಕಂಪನಿ ಉದ್ಧಾರ ಮಾಡುವುದಕ್ಕೆ ನಾವೂ ಕಷ್ಟಪಟ್ಟಿದ್ದೆವು. ಆದರೆ ಗುರೂಜಿಯವರು ಅಣ್ಣನ ಮಕ್ಕಳನ್ನು ಕಂಪನಿಯೊಳಕ್ಕೆ ಬಿಟ್ಟುಕೊಂಡಿದ್ದರು. ಇದಕ್ಕೆ ಬೇಸತ್ತು ಕೊಲೆ ಮಾಡಿದೆವು ಎಂದಿದ್ದಾರೆ.
ಇನ್ನು ಕೊಲೆಗೂ ಮುನ್ನ ವಾಟ್ಸಾಪ್ ಸಂದೇಶ ಕೂಡ ಕಳುಹಿಸಲಾಗಿದೆ. ಕೊಲೆ ಆರೋಪಿ ಮಂಜುನಾಥ್ ಮರೆವಾಡ ಎಂಬಾತ, ಅಣ್ಣನ ಮಕ್ಕಳ ಅವನತಿ ಬಳಿಕ ನಿಮ್ಮ ಅವನತಿ ಪ್ರಾರಂಭವಾಗಿದೆ. ಕಂಪನಿಯಿಂದ 400 ಜನರನ್ನು ತೆಗೆದು ಹಾಕಿದ್ದೀರಿ. ಅವರ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದರು. ಅದರ ಆಧಾರದ ಮೇಲೆ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದರು.