ಮೈಸೂರು: ಕಡೆಗೂ ಪೊಲೀಸರಿಗೆ ತಲೆ ನೋವಾಗಿದ್ದ ಸ್ಯಾಂಟ್ರೋ ರವಿಯ ಬಂಧನವಾಗಿದೆ. ಗುಜರಾತ್ ನಲ್ಲಿ ಪೊಲೀಸರ ಬಲೆಗೆ ಸಿಕ್ಕಿದ್ದಾನೆ. ಸುಮಾರು 11 ದಿನಗಳ ಬಳಿಕ ಪೊಲೀಸರಿಗೆ ತಗಲಾಕಿಕೊಂಡಿದ್ದಾನೆ.
ಪರಿಶಿಷ್ಟ ಸಮುದಾಯದ ಮಹಿಳೆಯನ್ನು ವಂಚಿಸಿ ಮದುವೆಯಾಗಿದ್ದಲ್ಲದೆ, ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿ, ವರದಕ್ಷಿಣೆ ಕಿರುಕುಳ ನೀಡಿದ್ದ ಆರೋಪವನ್ನು ಸ್ಯಾಂಟ್ರೋ ರವಿ ಎದುರಿಸುತ್ತಿದ್ದರು. ಸ್ಯಾಂಟ್ರೋ ರವಿ ವಿರುದ್ಧ ಎರಡನೇ ಪತ್ನಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಸ್ಯಾಂಟ್ರೋ ರವಿಯ ಹುಡುಕಾಟ ನಡೆಸಿದ್ದರು.
ಸ್ಯಾಂಟ್ರೋ ರವಿ ಬಗ್ಗೆ ಆತನ ಪತ್ನಿ, ಲೈಂಗಿಕ ಸೋಂಕು ಇದ್ದರು ತನಗೂ ಆ ಸೋಂಕು ಅಂಟಿಸಿದ್ದಾನೆ. ಅದಕ್ಕೆ ಔಷಧಿ ಇಲ್ಲ. ವರದಕ್ಷಿಣೆ ಕಿರುಕುಳವನ್ನು ನೀಡಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಆರೋಪಿ ಉದ್ಯೋಗ ನೀಡುವ ನೆಪದಲ್ಲಿ ಕರೆಸಿಕೊಂಡು, ಮತ್ತು ಬರುವ ಜ್ಯೂಸ್ ಕುಡಿಸಿ, ಅತ್ಯಾಚಾರ ಮಾಡಿದ್ದ. ನಂತರ ಮದುವೆಯೂ ಆದ. ಮದುವೆಯ ಬಳಿಕವೂ ಚಿತ್ರಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದರು. ದೂರು ನೀಡಿದ ಹನ್ನೊಂದು ದಿನ ಬಳಿಕ ಆರೋಪಿಯ ಬಂಧನವಾಗಿದೆ.