ಬೆಂಗಳೂರು: 40% ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಸಂತೋಷ್ ಪಾಟೀಲ್ ಪ್ರಕರಣ ಏನಾಯ್ತು ಎಂಬ ಪ್ರಶ್ನೆ ಹಲವರಲ್ಲಿತ್ತು. ಇದೀಗ ಆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಮುಚ್ಚಿ ಹೇಗೆ ಹಾಕ್ತಾರೆ. ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಎಸ್ಪಿ ನೇತೃತ್ವದಲ್ಲಿ ತಂಡಗಳು ಕಾರ್ಯಾ ನಡೆಸಯತ್ತಿವೆ. ಅದು ಡಿಟೈಲ್ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಮಾಜಿ ಸಚಿವ ಈಶ್ವರಪ್ಪ ಅವರಿಗೆ ನೋಟೀಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದಂತೆ, ಎಲ್ಲಾ ರೀತಿಯಿಂದ ಎಲ್ಲಾ ಆಯಾಮಾದಿಂದ ತನಿಖೆಯಾಗ್ತಾ ಇದೆ. ಬಿಡುವ ಪ್ರಶ್ನೆಯೇ ಇಲ್ಲ. ಯಾರ್ಯಾರು ಇದರ ಹಿಂದೆ ಇದ್ದಾರೆ ಎಂಬುದು ತನಿಖೆಯಲ್ಲಿ ತಿಳಿಯಲಿದೆ. ಅಗತ್ಯವಿದ್ದರೆ ಈಶ್ವರಪ್ಪ ಅವರಿಗೂ ನೋಟೀಸ್ ಕೊಡ್ತಾರೆ. ಅಗತ್ಯವಿಲ್ಲದೆ ಹೋದರೆ ನೋಟೀಸ್ ಕೊಡುವುದಿಲ್ಲ. ಅದು ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ.
ಇದೆ ವೇಳೆ ಪಿಎಸ್ಐ ಹಗರಣ ಬಗ್ಗೆ ಮಾತನಾಡಿ, ಕಾಂಗ್ರೆಸ್ ನವರೇ ಇದ್ದಾರೆ. ನಾನು ಇಲ್ಲಿ ಪಕ್ಷ ಪಂಗಡಕ್ಕಿಂತ ಮೇಲಿರುವ ಎಕ್ಸಾಂಮಿನೇಷನ್ ಅವ್ಯವಹಾರದ ಕಡೆ ಗಮನ ಕೊಟ್ಟಿದ್ದೇನೆ. ಅದು ಯಾರೇ ಮಾಡಿದ್ದರು ಸಹ ಅದನ್ನು ಪತ್ತೆ ಹಚ್ಚಿ, ಅರೆಸ್ಟ್ ಮಾಡಿ, ಕಾನೂನು ಪ್ರಕಾರ ಅವರಿಗೆ ಶಿಕ್ಷೆ ಕೊಡಿಸುತ್ತಾರೆ ಎಂದಿದ್ದಾರೆ.