ಮಂಡ್ಯ: ಅಪ್ಪು ಎಲ್ಲರ ಮನಸ್ಸಲ್ಲೂ ಅಜರಾಮರರಾಗಿದ್ದಾರೆ. ಅಪ್ಪು ಸಿನಿಮಾಗಳು ಟಿವಿಯಲ್ಲಿ ಬಂದರೆ ಅವರನ್ನ ನೆನೆದು ಜನ ಕಣ್ಣೀರಾಗುತ್ತಿದ್ದಾರೆ. ಇಷ್ಟು ಬೇಗ ಅವರನ್ನ ಕರೆದುಕೊಂಡ ಯಮನಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಜೊತೆಗೆ ದೇವರ ಪೂಜೆಗಳಲ್ಲೂ ಅಪ್ಪು ಅವರನ್ನ ಮುಂದಿಡುತ್ತಿದ್ದಾರೆ. ಇದೀಗ ಸಂಕ್ರಾಂತಿ ಹಬ್ಬಕ್ಕೂ ಅಪ್ಪು ನೆನೆದಿದ್ದಾರೆ ಮಂಡ್ಯ ಜನ.
ಸಂಕ್ರಾಂತಿ ಹಬ್ವದಂದು ರಾಸುಗಳನ್ನ ಹಾರಿಸುವ ಪದ್ಧತಿ ಇದೆ. ಈ ವೇಳೆ ಎತ್ತುಗಳಿಗೆ ಬಲೂನ್ ಕಟ್ಟಿ, ಬಣ್ಣ ಬಳಿದು ಶೃಂಗಾರ ಮಾಡ್ತಾರೆ. ಅದೇ ರೀತಿ ನಿನ್ನೆ ಜಿಲ್ಲೆಯ ಕೆ ಎಂ ದೊಡ್ಡಿ ಮತ್ತು ಸುತ್ತಮುತ್ತಲಿನ ಜನ ಸೇರಿ ರಾಸುಗಳಿಗೆ ಕಿಚ್ಚು ಹಾರಿಸಿದ್ರು.
ಈ ವೇಳೆ ಎತ್ತುಗಳ ಮೈ ಮೇಲೆ ಅಪ್ಪು ಭಾವಚಿತ್ರ ಬಿಡಿಸಿರುವುದು ಕಂಡು ಬಂದಿದೆ. ಜೊತೆಗೆ ದೇವರೊಟ್ಟಿಗೆ ಅಪ್ಪು ಭಾವಚಿತ್ರವನ್ನು ಇಟ್ಟು ಪೂಜೆ ಮಾಡಿದ್ದಾರೆ. ಇದು ಮಂಡ್ಯದ ಜನ ಅಪ್ಪು ಅವರಿಗೆ ನೀಡಿದ ಗೌರವವಾಗಿದೆ.