ಹುಬ್ಬಳ್ಳಿ : ಕೊರೊನಾ ಮೂರನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲೆಡೆ ಅಲರ್ಟ್ ಆಗಿದ್ದಾರೆ. ಎಲ್ಲೆಡೆ ಟೆಸ್ಟ್ ಮಾಡಲು ಶುರು ಮಾಡಿದ್ದಾರೆ. ವೈರಸ್ ಜಾಸ್ತಿಯಾಗಬಾರದೆಂದು ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದ್ದಾರೆ. ವೈರಸ್ ಹೆಚ್ಚಳದ ಹಿನ್ನೆಲೆ ಹುಬ್ಬಳ್ಳಿಗೆ ಬರೋ ಸಾರಿಗೆ ಬಸ್ ಗೂ ಸ್ಯಾನಿಟೈಜೇಷನ್ ಮಾಡುತ್ತಿದ್ದಾರೆ.
ಧಾರವಾಡ ಎಸ್.ಡಿ.ಎಂ. ಕಾಲೇಜಿನಲ್ಲಿ 300 ಕ್ಕೂ ಹೆಚ್ಚು ಜನರಿಗೋ ಕೋವಿಡ್ ಸೋಂಕು ಹಿನ್ನೆಲೆ ಮೂರನೇ ಅಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆ ಅಲ್ಲಾಪುರ ಗ್ರಾಮ ಪಂಚಾಯ್ತಿ ಸದಸ್ಯನಿಂದ ಬಸ್ ನಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಗ್ರಾ.ಪಂ. ಸದಸ್ಯ ಮಲ್ಲಿಕಾರ್ಜುನ ರಡ್ಡೇರರಿಂದ ಮುಂಜಾಗ್ರತ ಕ್ರಮ ವಹಿಸಿ ಸ್ಯಾನಿಟೈಸ್ ಮಾಡಿಸುತ್ತಿದ್ದಾರೆ.
ಗ್ರಾಮಕ್ಕೆ ಬರೋ ಎರಡೂ ಬಸ್ ಗಳಿಗೆ ಸ್ಯಾನಿಟೈಸ್ ಮಾಡಿಸಲಾಗಿದೆ. ಈ ಹಿಂದೆಯೂ ಕೊರೋನಾ ಮುಕ್ತ ಗ್ರಾಮ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮ, ಈ ಬಾರಿಯೂ ಅದೇ ರೀತಿ ಸೋಂಕು ಹರಡದಂತೆ ನೋಡಿಕೊಳ್ಳುವ ಕೆಲಸ ಮಾಡ್ತಿದ್ದಾರೆ ಗ್ರಾಮ ಪಂಚಾಯತಿ ಸದಸ್ಯರು.