ಸುದ್ದಿಒನ್, ಚಿತ್ರದುರ್ಗ, ಮೇ. 24 : ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಾದ ವೈಭವನ್, ಜ್ಞಾನಸಾಗರ್, ಭೂಮಿಕಾ ಉತ್ತಮ ರ್‍ಯಾಂಕ್ ಪಡೆಯುವುದರೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವೈಭವನ್ ಬಿ ಎಸ್ಸಿ AG -11ನೇ ರ್‍ಯಾಂಕ್, ವೆಟರ್ನರಿ-43ನೇರ್‍ಯಾಂಕ್, ಇಂಜಿನಿಯರ್ ನಲ್ಲಿ 6012ನೇ ರ್‍ಯಾಂಕ್ ಗಳಿಸಿದ್ದಾರೆ. ಹಾಗೆ ಜ್ಞಾನಸಾಗರ್ ಇಂಜಿನಿಯರ್ ನಲ್ಲಿ 6015ನೇ ರ್‍ಯಾಂಕ್ ಗಳಿಸಿದರೆ, ಭೂಮಿಕಾ ಇಂಜಿನಿಯರಿಂಗ್ ವಿಭಾಗದಲ್ಲಿ 8381 ರ್‍ಯಾಂಕ್ ಪಡೆದು ಸಾಧನೆಗೈದಿದ್ದಾರೆ.
ಹೀಗೆ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಿಟಿ ರವೀಂದ್ರ ಸರ್ ಹಾಗೂ ಪ್ರಾಂಶುಪಾಲರು ಉಪನ್ಯಾಸಕರು ಅಭಿನಂದಿಸಿದ್ದಾರೆ.




