JEE ಪ್ರವೇಶ ಪರೀಕ್ಷೆಯಲ್ಲಿ ಸಾಣಿಕೆರೆ ವೇದ ಪಿಯು ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ತನ್ನ ಛಾಪು ಮೂಡಿಸಿದ್ದ ಸಾಣಿಕೆರೆ ವೇದ ಪಿಯು ಕಾಲೇಜು ಈಗ JEE MAINS ನಲ್ಲೂ ತಮ್ಮ ಕಾಲೇಜಿನ ಮೂರು ವಿದ್ಯಾರ್ಥಿಗಳು ADVANCE ಗೆ ಅರ್ಹತೆ ಪಡೆದುಕೊಂಡು ಮುಂದಿನ ಸಾಧನೆಗಾಗಿ ಮುನ್ನುಗ್ಗುತ್ತಿರುವ ವೇದ ಪಿಯು ಕಾಲೇಜು.

ಚಳ್ಳಕೆರೆ ತಾಲೂಕು ಸಾಣಿಕೆರೆಯ ವೇದ ಪಿಯು ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶದೊಂದಿಗೆ ಇಡೀ ತಾಲೂಕಿನಲ್ಲಿಯೇ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ದಾಪುಗಾಲು ಇಡುತ್ತಾ ಗುಣಮಟ್ಟದ ಶಿಕ್ಷಣಕ್ಕೆ ಒಮ್ಮೆ ತಿರುಗಿ ನೋಡುವಂತೆ ಸಾಧನೆ ಮಾಡಿದೆ.

ಜ್ಞಾನಸಾಗರ್, ವೈಭವನ್, ಧನುಷ್ಇವರು JEE MAINS ನಲ್ಲಿ ಉತ್ತಮ ಅಂಕ ಪಡೆದು ADVANCE ಗೆ ಅರ್ಹತೆ ಪಡೆದಿದ್ದಾರೆ. ಉತ್ತಮ ಪ್ರತಿಭೆ ತೋರಿದ ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಡಿಟಿ ರವೀಂದ್ರರವರು ಹಾಗೂ ಉಪನ್ಯಾಸಕ ವರ್ಗದವರು ಹೃತ್ಪೂರ್ವಕವಾದ ಅಭಿನಂದನೆಗಳನ್ನ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks