ಚಳ್ಳಕೆರೆ, (ಜೂ.03) : ತಾಲೂಕಿನ ಸಾಣಿಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಶೃತಿ ಚಂದ್ರಕಾಂತ್ ಮತ್ತು ಉಪಾಧ್ಯಕ್ಷರಾಗಿ ನಾಗರಾಜ್ ಅವರನ್ನು ಚುನಾವಣಾ ಅಧಿಕಾರಿ ತಹಶೀಲ್ದಾರ್ ಎನ್. ರಘುಮೂರ್ತಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಅಧಿಕಾರ ಸಿಗುವುದ ದೇವರ ಆಶೀರ್ವಾದ, ಪೂರ್ವಜನ್ಮದ ಪುಣ್ಯ, ಅದರಂತೆ ಸಿಕ್ಕ ಅವಕಾಶವನ್ನು ಜನರ ಸೇವಗೆ ಮುಡುಪಿಡಬೇಕು. ಗಾಂಧೀಜಿಯವರು ಕಂಡ ಕನಸು ಗ್ರಾಮಸ್ವರಾಜ್, ಪಂಚಾಯಿತಿ ಮಟ್ಟದಲ್ಲಿ ಸ್ವಚ್ಚತೆ, ಶಿಕ್ಷಣಕ್ಕೆ ಹೆಚ್ಚು ಒತ್ತು, ನಿವೇಶನ ಹಾಗೂ ವಸತಿ ಸೌಕರ್ಯ ಕುಡಿಯುವ ನೀರಿಗೆ ಸಂಬಂದಿಸಿದಂತೆ ಜಲ್ವಂತ ಸಮಸ್ಯಗಳ ಬಗ್ಗೆ ಗಮನ ಹರಿಸಿದಾಗ ಮಾತ್ರ ಅವರ ಸಂದೇಶಗಳಿಗೆ ನಾವು ಕೊಡುವಂತಹ ಕಾಣಿಕೆಯಾಗುತ್ತದೆ.
ಬಡವರ ಬಗ್ಗೆ ನಿರ್ಗತಿಕರ ಹಾಗೂ ವಿಕಲಚೇತನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಬೇಕು. ಅವರಿಗೆ ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯ ಸಿಗುವಂತೆ ಶ್ರಮವಹಿಸಬೇಕು. ಗ್ರಾಮ ಪಂಚಾಯಿತಿ ಯೋಜನೆ ರೂಪಿಸುವಾಗ ಮುಂದಿನ 30 ವರ್ಷ ದೃಷ್ಟಿಕೋನವನ್ನು ಇಟ್ಟುಕೊಂಡು ಯೋಜನೆಗಳನ್ನು ರೂಪಿಸವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ರಾಜ ಸ್ವ ನಿರೀಕ್ಷಕ ಲಿಂಗೇಗೌಡ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವರಾಜ್, ಗ್ರಾಮ ಲೆಕ್ಕಿಗ ಉಮೇಶ್, ಕೇಶವಚಾರಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಪೋಲಿಸ್ ಸಿಬ್ಬಂದಿಗಳು ಇದ್ದರು.