ಸಂಘ ಶತಾಬ್ದಿ : ಕೋಟೆ ನಾಡಿನಲ್ಲಿ ಕಣ್ಮನ ಸೆಳೆದ ಆರ್‌ಎಸ್‌ಎಸ್‌ ಪಂಥ ಸಂಚಲನ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಅ. 12 : ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಸಾಧನೆಗೆ ನೂರು ವರ್ಷದ ಸಂಭ್ರಮ ತುಂಬಿದ ಹಿನ್ನಲೆಯಲ್ಲಿ ಭಾನುವಾರ ಕೋಟೆ ನಗರ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ‌ ವತಿಯಿಂದ ಶತಾಬ್ದಿ ಪಥಸಂಚಲನದಲ್ಲಿ ಗಣ ವೇಷದಾರಿಗಳು ಶಿಸ್ತು ಬದ್ದ ಆಕರ್ಷಕ ಪಥ ಸಂಚಲನವನ್ನು ನಡೆಸಲಾಯಿತು.


ನಗರದ ರಂಗಯ್ಯನ ಬಾಗಿಲ ಸುರಕ್ಷಾ ಕಾಲೇಜು ಆವರಣದಲ್ಲಿ ಸೇರ್ಪಡೆಯಾಗಿ ಅಲ್ಲಿಂದ ರಂಗಯ್ಯನ ಬಾಗಿಲು ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ತರಾಸು ಬೀದಿ ಮಾರ್ಗವಾಗಿ ಏಕನಾಥೇಶ್ವರಿ ಪಾದಗುಡಿ, ಕೋಟೆ ರಸ್ತೆ, ಕಾಮನಬಾವಿ ಬಡಾವಣೆ, ಪೋಸ್ಟ್ ಅಫೀಸ್ ರಸ್ತೆ, ಫಿಲ್ಟರ್ ಹೌಸ ರಸ್ತೆ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಮೊದಲನೇ ತಿರುವು, ಜೋಗಿಮಟ್ಟಿ ರಸ್ತೆ, ಆಸ್ಪತ್ರೆ ವೃತ್ತದ ಮೂಲಕ ವಾಪಾಸ್ಸ್ ಸುರಕ್ಷಾ ಕಾಲೇಜನ್ನು ತಲುಪಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪಥ ಸಂಚಲನ ಸಾಗುವ ದಾರಿಯಲ್ಲಿ ಮನೆಗಳ ಮುಂದೆ ನೀರನ್ನು ಹಾಕಿ ಬಣ್ಣ ಬಣ್ಣದ ರಂಗೋಲಿಯನ್ನು ಹಾಕುವುದರ ಮೂಲಕ ಪಥ ಸಂಚಲವನ್ನು ಸ್ವಾಗತಿಸಲಾಯಿತು. ಕೆಲವರ ಮನೆಯ ಮುಂದೆ ಭಾರತಾಂಬೆಯ ಭಾವಚಿತ್ರವನ್ನು ಇರಿಸುವುದರ ಮೂಲಕ ಸ್ವಾಗತವನ್ನು ಮಾಡಲಾಯಿತು. ಇದ್ದಲ್ಲದೆ ಗಣ ವೇಷಧಾರಿಗಳ ಮೇಲೆ ಪುಷ್ಪ ವೃಷ್ಟಿಗೈದು ಭಾರತಾ ಮಾತಾಕಿ ಜೈ , ಜೈ ಶ್ರೀರಾಮ್ ಎನ್ನುವ ಜಯ ಘೋಷ ಕೂಗಿ ದೇಶ ಪ್ರೇಮವನ್ನು ಮೆರೆದರು.

ಕಾರ್ಯಕ್ರಮದಲ್ಲಿ ಎರಡು ವರ್ಷದ ಪುಟ್ಟಸ್ವಯಂಸೇವಕ

ಈ ಪಥ ಸಂಚಲದಲ್ಲಿ ಭಾಗವಹಿಸಿದ ಗಣ ವೇಷಧಾರಿಗಳು ಖಾಕಿ ಬಣ್ಣದ ಪ್ಯಾಂಟ್, ಶುಭ್ರ ಶ್ವೇರ ವರ್ಣದ ಅಂಗಿ ತಲೆಯ ಮೇಲೆ ಕರಿ ಟೋಪಿಯನ್ನು ಹಾಕಿಕೊಂಡು ಕೈಯಲ್ಲಿ ದಂಡವನ್ನು ಹಿಡಿದು ಸಾವಿರಾರು ಸ್ವಯಂ ಸೇವಕರು ಶಿಸ್ತು ಬದ್ದವಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ದೃಶ್ಯ ಮನ ಮೋಹಕವಾಗಿತ್ತು. ಇದರಲ್ಲಿ ಸಣ್ಣ ಸಣ್ಣ ಮಕ್ಕಳು ಸಹಾ ಈ ವೇಷವನ್ನು ಧರಿಸಿ ಭಾಗವಹಿಸಿದ್ದು ನೋಡುಗರ  ಕಣ್ಮನ ಸೆಳೆಯಿತು.

ಈ ಪಥ ಸಂಚಲನದಲ್ಲಿ ಭಾರತಾಂಭೆ, ಒನಕೆ ಓಬವ್ವ, ಡಾ.ಬಿ.ಆರ್ ಆಂಬೇಡ್ಕರ್ ಹಾಗೂ ದೇಶವನ್ನು ಕಾಯುವ ಸೈನಿಕರ ವೇಷವನ್ನು ಮಕ್ಕಳು ಧರಿಸಿದ್ದರು, ಇದೇ ಸಂದರ್ಭದಲ್ಲಿ ಡಾ.ಜಿ, ಹಾಗೂ ಗೂರೂಜಿ ಯವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಇರಿಸಲಾಯಿತು. ಸುಶ್ರಾವ್ಯವಾದ ಡ್ರಮ್ ಮತ್ತಿತರ ವಾದ್ಯಗಳಿಂದ ಮೊಳಗಿದ ಹಿಮ್ಮೇಳ ಪಥ ಸಂಚಲನಕ್ಕೆ ಮೆರುಗು ನೀಡಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಚಾಲಕರಾದ ನಾಗೇಶ್, ರಾಜ ಕುಮಾರ್ ರಾಮಕಿರಣ್, ಪ್ರಬಾಕರ್, ಶ್ರೀನಾಥ್,ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಯುವ ಮುಖಂಡರಾದ ಅನಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜನ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಗ್ರಾಮಾಂತರ ಅಧ್ಯಕ್ಷ ಕೆ ನಾಗರಾಜ್, ಭಾರ್ಗವಿ ದ್ರಾವಿಡ್, ನಾಗರಾಜ್ ಸಂಗಂ, ಉಮೇಶ್ ಕಾರಜೋಳ, ರುದೇಶ್, ಜಿ.ಎಂ.ಸುರೇಶ್, ನಂದಿ ನಾಗರಾಜ್ ಟಿ.ಜಿ ನರೇಂದ್ರನಾಥ್, ಬದರಿನಾಥ್, ನಾಗರಾಜ್ ಬೇದ್ರೇ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Enable Notifications OK No thanks