ಸಂಘ ಶತಾಬ್ದಿ | ಚಳ್ಳಕೆರೆಯಲ್ಲಿ ಗಮನಸೆಳೆದ ಆರ್‌ಎಸ್‌ಎಸ್‌ ಪಥಸಂಚಲನ…!

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 18 : ಜಗತ್ತಿನ ಅತಿದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್‌) ಶತಾಬ್ದಿ ನಿಮಿತ್ತ ನಗರದಲ್ಲಿ ಆಯೋಜಿಸಿದ್ದ “ಭವ್ಯ ಪಥಸಂಚಲನ” ಕಾರ್ಯಕ್ರಮದಲ್ಲಿ ಗಣವೇಷ ಸಹಿತ 250 ಕ್ಕೂ ಹೆಚ್ಚು ಆರ್‌ಎಸ್‌ಎಸ್‌ ನ ಸ್ವಯಂ ಸೇವಕರು ಭಾಗವಹಿಸಿದ್ದರು.

ನಗರದ ಗಾಂಧಿನಗರದ ಮುಖ್ಯ ರಸ್ತೆಯಿಂದ ಹೊರಟ ಆಕರ್ಷಕ ಪಥ ಸಂಚಲನ ಗಾಂಧಿನಗರ, ಬಸವೇಶ್ವರ ವೃತ್ತ, ನೆಹರು ವೃತ್ತ, ಅಂಬೇಡ್ಕರ್ ವೃತ್ತ ದಿಂದ ತ್ಯಾಗರಾಜನ ನಗರದ ಮುಖ್ಯ ರಸ್ತೆಯ ಮೂಲಕ ವಾಲ್ಮೀಕಿ ವೃತ್ತಕ್ಕೆ ತಲುಪಿ ನಂತರ ಬಿಎಂಜಿಎಚ್ ಪೌಢಶಾಲೆ ಆವರಣಕ್ಕೆ ಬಂದು ತಲುಪಿತು. ಪಥಸಂಚಲನ ವೇಳೆ ಸಾರ್ವಜನಿಕರು ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಪುಷ್ಪಾರ್ಚನೆ ಮಾಡಿದರು.

ಈ ವೇಳೆ ಆರ್‌ಎಸ್‌ಎಸ್‌ ನ ಮುಖಂಡ ಪ್ರಕಾಶ ಮಾತನಾಡಿ, ರಾಷ್ಟೀಯ ಸ್ವಯಂ ಸೇವಕ ಸಂಘವು ಸಬಲ, ಸದೃಢ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಹಿಂದೂ ಪರಂಪರೆ, ಸನಾತನ ಸಂಸ್ಕೃತಿ ರಕ್ಷಣೆಯ ಧ್ಯೇಯದೊಂದಿಗೆ ರಾಷ್ಟ್ರಪ್ರೇಮಿಗಳ ಶಕ್ತಿಶಾಲಿ ಸಂಘಟನೆಯಾಗಿದೆ ಎಂದರು.

ಈ ಪಂಥ ಸಂಕಲನದಲ್ಲಿ ಆರ್‌ಎಸ್‌ಎಸ್‌ ನ ಬಾಳೆಕಾಯಿ ರಾಮದಾಸ್, ಚಳ್ಳಕೆರೆ ಬಿಜೆಪಿ ಮಂಡಲದ ತಾಲ್ಲೂಕು ಅಧ್ಯಕ್ಷ ಬಿ.ಎಂ. ಸುರೇಶ, ಜಯಪಾಲಯ್ಯ, ಡಾ.ಮಂಜುನಾಥ, ಪ್ರಕಾಶ,(ಡಾಬಾ) ಎಬಿವಿಪಿ ಮಂಜುನಾಥ, ಶ್ರೀನಿವಾಸ್, ನವೀನ್, ದಯಾನಂದ ಪ್ರಹ್ಲಾದ್, ಮಾರುತಿ, ಕೃಷ್ಣಾ, ಯತೀಶ, ಮಿರಾಸಾಭಿಹಳ್ಳಿ ಸುರೇಶ, ಮಾತೃಶ್ರೀ ಮಂಜುನಾಥ, ಎಲೆ ವೀರಭದ್ರಪ್ಪ, ಚಿದಾನಂದ, ಸೇರಿದಂತೆ ಆರ್‌ಎಸ್‌ಎಸ್‌ ಮುಖಂಡರು ಇದ್ದರು.

Share This Article
Enable Notifications OK No thanks