ಸಂಘ ಶತಾಬ್ದಿ : ಮೊಳಕಾಲ್ಮೂರಿನಲ್ಲಿ ಆಕರ್ಷಕ ಆರ್‌ಎಸ್‌ಎಸ್‌ ಪಥಸಂಚಲನ

1 Min Read

 

ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ, ಮೊಳಕಾಲ್ಮೂರು.
ಮೊ : 93806 27082

ಸುದ್ದಿಒನ್, ಮೊಳಕಾಲ್ಮುರು, ಅಕ್ಟೋಬರ್. 19 : ರಾಷ್ಟಿಯ ಸ್ವಯಂ ಸೇವಕಸಂಘವು (ಆರ್‌ಎಸ್‌ಎಸ್‌) ನೂರು ವರ್ಷಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ವಿಜಯ ದಶಮಿ ಪಥಸಂಚಲನ ನಡೆಯಿತು.

ಬಿಳಿ ಶರ್ಟ್, ಕಪ್ಪು ಕ್ಯಾಪ್, ಖಾಕಿ ಪ್ಯಾಂಟ್ ಧರಿಸಿದ ಸಂಘದ 450ಕ್ಕೂ ಹೆಚ್ಚು ಸ್ವಯಂಸೇವಕರು ಶಿಸ್ತುಬದ್ದವಾಗಿ ಪಥಸಂಚಲನದಲ್ಲಿ ಭಾಗಿಯಾದರು.

ಪಟ್ಟಣದ ಕೋಟೆ ಬಡಾವಣೆಯ ನುಂಕಪ್ಪನಕಟ್ಟೆ ಬಳಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು.

ಆಕರ್ಷಕ ಪಥಸಂಚಲನವು ಶ್ರೀ ಮಾರ್ಕಂಡಯ್ಯ ಸ್ವಾಮಿ ದೇವಸ್ಥಾನದ ರಸ್ತೆಯಿಂದ ಸಾಗಿ ದೊಡ್ಡಪೇಟೆ ರಸ್ತೆ,ದೊಡ್ಡಪೇಟೆ ಸರ್ಕಲ್,ಎಲ್ ಬಿ ಶಾಸ್ತ್ರಿ ರಸ್ತೆ ಮುಖ್ಯರಸ್ತೆ,ಕೋನಸಾಗರ ರಸ್ತೆ ದಾಸರಹಟ್ಟಿ, ಕೆಇಬಿ ಸರ್ಕಲ್, ಎಸ್ ಬಿ ಐ ರಸ್ತೆ, ತಿಮ್ಮಪ್ಪ ದೇವಸ್ಥಾನ ರಸ್ತೆ,ಬನ್ನಿ ಮಹಂಕಾಳಿ ದೇವಸ್ಥಾನ ರಸ್ತೆ, ಮಾರುತಿ ಬಡಾವಣೆ ರಸ್ತೆ, ಮತ್ತು ಪಟ್ಟಣ ಪಂಚಾಯಿತಿ ಮುಂಭಾಗದ ರಸ್ತೆ ಮೂಲಕ ಸಾಗಿ ನುಂಕಪ್ಪನ ಕಟ್ಟೆ ಬಳಿ ಪುನರ್ ಸಮಾವೇಶಗೊಂಡಿತು.

ಪಥಸಂಚಲನ ನಡೆಯುವ ದಾರಿಯುದ್ದಕ್ಕೂ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದರು.

ಪಥಸಂಚಲನವು ರಾಷ್ಟ್ರಪ್ರೇಮ ಮತ್ತು ಶಿಸ್ತಿನ ಪ್ರದರ್ಶನವಾಗಿದ್ದು, ಸಂಘಟನೆಯ ಬಲ ಹಾಗೂ ಏಕತೆ ತೋರಿಸುವುದಾಗಿದೆ. ಸಮಾಜದಲ್ಲಿ ಶ್ರೇಷ್ಠ ನಡತೆ, ಸೇವಾಭಾವ ಮತ್ತು ಶಿಸ್ತು ಬೆಳೆಸುವುದು. ಯುವಕರಲ್ಲಿ ದೇಶಭಕ್ತಿ ಹಾಗೂ ಸೇವಾ ಮನೋಭಾವ ಜಾಗೃತಗೊಳಿಸುವ ಭಾಗವಾಗಿ ಪಥಸಂಚಲನವು ನಡೆಯಿತು.

Share This Article
Enable Notifications OK No thanks