ಸುದ್ದಿಒನ್, ಹರಿಯಾಣ : ಸನಾತನ ಧರ್ಮವು ಭಾರತಕ್ಕಿರುವ ಮತ್ತೊಂದು ಹೆಸರು. ದೇಶದ ಸಂಸ್ಕೃತಿ ಸನಾತನ ಧರ್ಮದ ಮೇಲೆ ನಿಂತಿದೆ. ಅಂತಹ ಸದ್ಗುಣವನ್ನು ನಾಶಮಾಡಲು ಬಯಸುವುದು ಸ್ವಯಂ ಹಾನಿಗೆ ಸಮನಾಗಿರುತ್ತದೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಾಶಪಡಿಸುವ ಹೇಳಿಕೆಗಳು ದೇಶಾದ್ಯಂತ ತೀವ್ರ ಸಂಚಲನ ಉಂಟು ಮಾಡುತ್ತಿರುವುದು ಗೊತ್ತೇ ಇದೆ. ಅವರನ್ನು ಉದ್ದೇಶಿಸಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ. ಹರಿಯಾಣದ ರೋಹ್ಟಕ್‌ನಲ್ಲಿರುವ ಬುಧವಾರ ಬಾಬಾ ಮಸ್ತನಾಥ ಮಠದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ಸನಾತನವೆಂದರೆ ಎಂದಿಗೂ ಶಾಶ್ವತವಾಗಿ ಉಳಿಯುವಂತದ್ದು. ನಮ್ಮ ಧರ್ಮವೂ ಹಾಗೆಯೇ ಎಂದಿಗೂ ಇರುತ್ತದೆ ಎಂದು ಹೇಳಿದರು. ಎಲ್ಲರೂ ಒಗ್ಗಟ್ಟಾಗಿ ಮತ್ತು ಮಾನವ ನಡವಳಿಕೆಯ ಅತ್ಯುತ್ತಮ ಮಾದರಿಯನ್ನು ಜಗತ್ತಿಗೆ ನೀಡಬೇಕೆಂದು ಅವರು ಕರೆ ನೀಡಿದರು. ಪ್ರತಿಯೊಬ್ಬರಿಗೂ ಮಾತೃಭೂಮಿಯ ಬಗ್ಗೆ ಭಕ್ತಿ, ಪ್ರೀತಿ, ಸಮರ್ಪಣೆ ಇರಬೇಕು ಎಂದರು.
ಇಡೀ ಜಗತ್ತೇ ಒಂದು ಕುಟುಂಬ. ಇದು ನಮ್ಮ ಪರಿಕಲ್ಪನೆ. ಅದರಂತೆ ನಡೆದುಕೊಳ್ಳಿ. ದೇಶದಲ್ಲಿ ವೈವಿಧ್ಯತೆ ಹೆಚ್ಚಿದ್ದು, ಪರಸ್ಪರ ಹೊಡೆದಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ಮಾನವರೆಲ್ಲರೂ ಒಂದೇ ಎಂದು ಜಗತ್ತಿಗೆ ಕಲಿಸುವ ಸಾಮರ್ಥ್ಯವಿರುವ ದೇಶವನ್ನು ನಿರ್ಮಿಸಬೇಕೆಂದು ಕರೆ ನೀಡಿದರು. ಮಠಾಧೀಶರು ಜಗತ್ತಿನ ಏಳಿಗೆಗಾಗಿ ಭಾರತವನ್ನು ರಚಿಸಿದ್ದಾರೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ತಮ್ಮ ಜ್ಞಾನವನ್ನು ನೀಡುವ ಸಮಾಜವನ್ನು ನಿರ್ಮಿಸಿದ್ದಾರೆ ಎಂದರು.
ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ವಿಕೆ ಸಿಂಗ್, ಯೋಗ ಗುರು ಬಾಬಾ ರಾಮದೇವ್ ಸೇರಿದಂತೆ ಹಲವು ಗಣ್ಯ ಸಾಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಗತ್ತಿನ ಎಲ್ಲೆಡೆ ಸಮಸ್ಯೆ ಇದ್ದರೂ ಎಲ್ಲರೂ ಪರಿಹಾರಕ್ಕಾಗಿ ಭಾರತದತ್ತ ನೋಡುತ್ತಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಒಂದು ಕಾಲದಲ್ಲಿ ಅಸಾಧ್ಯ ಎನಿಸಿದ್ದ ಅಯೋಧ್ಯೆ ರಾಮಮಂದಿರ ನಿರ್ಮಾಣ ಈಗ ನನಸಾಗಿದೆ ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಹಂತ್ ಚಂದನಾಥ್ ಮಠದಲ್ಲಿ ಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದರು.