ಗ್ಯಾರಂಟಿ ಯೋಜನೆಗಾಗಿ ಎಸ್ಪಿಯ ಸಂಬಳ ನಿಲ್ಲಿಸಿಲ್ಲ : ಸಚಿವ ಪರಮೇಶ್ವರ್ ಸ್ಪಷ್ಟನೆ

suddionenews
1 Min Read

 

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆಯಷ್ಟೇ ನೌಕರರ ವುಚಾರವಾಗಿ ಟ್ವೀಟ್ ಮಾಡಿದ್ದರು. ನೌಕರರಿಗೆ ಸಕಾಲಕ್ಕೆ ಸಿಗದ ವೇತನ!. ಇಲ್ಲಿ ಎಲ್ಲಾ ಹಾಳುಮಾಡಿ ದೆಹಲಿಯಲ್ಲಿ ಭಾಷಣ ಹೊಡೆಯಲು ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ಸರ್ಕಾರೀ ನೌಕರರಿಗೆ ಸರಿಯಾದ್ ಸಮಯದಲ್ಲಿ ವೇತನ ನೀಡಲು ಸರ್ಕಾರದಲ್ಲಿ ಅನುದಾನದ ಕೊರತೆ ಇದೆ!. ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟು ಸಂಕಷ್ಟಕ್ಕೆ ತಲುಪಲು ನೇರ ಸಿದ್ದರಾಮಯ್ಯನವರ ಪಟಾಲಂ ಕಾರಣ. ಈಗ ಮಹದೇವಪ್ಪನಿಗೂ ಟೋಪಿ , ಕಾಕಪಾಟಿಲನಿಗೂ ಟೋಪಿ ಎಂದು ಟ್ವೀಟ್ ಮಾಡಿದ್ದರು.

ಈ ವಿಚಾರಕ್ಕೆ‌ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಬೇರೆ ಬೇರೆ ಕಾರಣದಿಂದ ಸಂಬಳ ನಿಲ್ಲಿಸಲಾಗುತ್ತದೆ. ಯಾವುದೋ ಕಾರಣಕ್ಕೆ ಎಸ್ಪಿಯ ಸಂಬಳ ನಿಲ್ಲಿಸಿರಬಹುದು. ಗ್ಯಾರಂಟಿ ಯೋಜನೆಗಳಿಗೆ ಸಂಬಳ ನಿಲ್ಲಿಸಿಲ್ಲ. ಯೋಜನೆಗೆ ಬೇಕಾದ ಹಣವನ್ನು ಬಜೆಟ್ ನಲ್ಲಿ ಇಟ್ಟಿದ್ದಾರೆ.

ಸಂಬಳ ನಿಲ್ಲಿಸಿ ಗ್ಯಾರಂಟಿ ನೀಡುವ ಅಗತ್ಯವಿಲ್ಲ. ಯತ್ನಾಳ್ ಕಾಮಾಲೆ ಕಣ್ಣಿನಿಂದ‌ನೋಡ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ಕುರಿತು ಕೆಲವು ಕಾರಣಗಳಿಂದ ರಿಪೊರ್ಟ್ ಮಾಡಿಕೊಂಡಿರಲಿಲ್ಲ. ಸ್ಥಳೀಯ ಶಾಸಕರು ನಾಯಕರಿಂದಲೂ ಕೆಲವು ಆಕ್ಷೇಪ ಬಂದಿತ್ತು. ಈ ಹಿನ್ನಲೆ ತಡೆ ಹಿಡಿಯಲಾಗಿದೆ. ಸರಿಪಡಿಸುತ್ತೇವೆ, ಎಚ್ಚರಿಕೆಯಿಂದ ವರ್ಗಾವಣೆ ಮಾಡುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *