ಸುದ್ದಿಒನ್, ಚಿತ್ರದುರ್ಗ, ಜನವರಿ. 29 : ನಗರದಲ್ಲಿ18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 17, 18ರಂದು ಆಯೋಜಿಸಿದ್ದು, ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿಗಳ ರಚನೆ ಮಾಡಲು ಸಭೆಯನ್ನು ಕರೆಯಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.
ನಗರದ ಒನಕೆ ಓಬವ್ವ ಸ್ಟೇಡಿಯಂ ರಸ್ತೆಯಲ್ಲಿರುವ ಅಪ್ಪಾಜಿ ಪರಿಸರ ಕಟ್ಟಡದಲ್ಲಿರುವ ಸಭಾಂಗಣದಲ್ಲಿ ಜ.29ರಂದು ಗುರುವಾರ (ಇಂದು) ಸಂಜೆ 4.30ಕ್ಕೆ ಕರೆಯಲಾಗಿದೆ.
ಸಮಿತಿಗಳ ರಚನೆ ಮತ್ತು ಆಯೋಜನೆ ವಿಷಯ ಸಂಬಂಧ ಕರೆಯಲಾಗಿರುವ ಸಭೆಗೆ ಸಾಹಿತಿಗಳು, ಸಂಘ-ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಕಸಾಪ ಸದಸ್ಯರು, ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡಲು ವಿನಂತಿಸಿದ್ದಾರೆ.



