ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ಅವರಿಗೆ ಸನ್ಮಾನ

1 Min Read

ಹಿರಿಯೂರು, ನವೆಂಬರ್. 03 : ಸಹಕಾರ ಯೂನಿಯನ್ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಶಿಮುಲ್ ಮತ್ತು ಯೂನಿಯನ್ ಬ್ಯಾಂಕ್ ನಿರ್ದೇಶಕ ಬಿಸಿ. ಸಂಜೀವಮೂರ್ತಿ ಅವರನ್ನು ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಶಿಮುಲ್ ಹಾಗೂ ಯೂನಿಯನ್ ಬ್ಯಾಂಕ್ ನಿರ್ದೇಶಕ ಬಿಸಿ.ಎಸ್.ಎಂ. ಮಾತನಾಡಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಸಹಕಾರದಿಂದ ಯೂನಿಯನ್ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ ಅವರು ಶಿಕ್ಷಣ, ಸಹಕಾರ ಸಂಘಗಳ ಬದಲಾವಣೆ ಸೇರಿದಂತೆ ಆಡಳಿತ ಯಾವ ರೀತಿ ನಡೆಸಬೇಕು ಇದರಿಂದ ರೈತರಿಗೆ ಯಾವ ರೀತಿ ಅನುಕೂಲವಾಗಲಿದೆ ಈಗೆ ಉತ್ತಮವಾದ ಕೆಲಸಗಳನ್ನು ನಿರ್ವಹಿಸಬೇಕೆಂಬ ಬದಲಾವಣೆಯ ಹೊಸ ರೂಪ ತರಲು ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡುತ್ತೇನೆ. ಕಾನೂನು, ನಿಯಮಗಳ ಜೊತೆಗೆ ಯಾವ ರೀತಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕು ಎಂಬ ಏಕೈಕ ಉದ್ದೇಶದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು.
ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಲಕ್ಕವ್ವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಸೆಲ್ವಿ, ರಮ್ಯಾ, ಜಯಲಲಿತಾ, ಭಾಗ್ಯಮ್ಮ, ಭಾರತಿ, ಮುಖಂಡರಾದ ಚಳ್ಳಕೆರೆಯ ರಾಜಣ್ಣ, ನಿರಂಜನ್ ಮೂರ್ತಿ, ಸುರೇಶ್ ಬಾಬು ಸೇರಿದಂತೆ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.

 

 

Share This Article
Enable Notifications OK No thanks