ತಿರುವನಂತಪುರಂ: ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗೋದಕ್ಕೆ ಸಹಸ್ರಾರು ಭಕ್ತರು ತುದಿಗಾಲಿನಲ್ಲಿ ನಿಂತಿರ್ತಾರೆ. ಆದ್ರೆ ಕೊರೊನಾದಿಂದಾಗಿ ಭಕ್ತಾಧಿಗಳಿಗೆ ಕೆಲ ದೇವಸ್ಥಾನದಲ್ಲಿ ಅನುಮತಿ ಇಲ್ಲ. ಆದ್ರೆ ಇಂದಿನಿಂದ ದೇವಸ್ಥಾನದಲ್ಲಿ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ.
ಶಬರಿ ಮಲೆಗೆ ದರ್ಶನ ಕೊಡುವ ಭಕ್ತರು ಕೆಲವೊಂದಿಷ್ಟು ಷರತ್ತುಗಳನ್ನು ಫಾಲೋ ಮಾಡಬೇಕಾಗಿದೆ. ಎರಡು ಡೋಸ್ ಲಸಿಕೆ ಕಡ್ಡಾಯ ಸರ್ಟಿಫಿಕೇಟ್ ಇರಬೇಕಾಗುತ್ತದೆ. ಹಾಗೇ ಕೊರೊನಾ ನೆಗೆಟಿವ್ ವರದಿಯನ್ನು ತರಬೇಕಾಗುತ್ತದೆ. ಇನ್ನು ಪೂಜೆಗೆ ಆನ್ಲೈನ್ ನಲ್ಲೇ ಬುಕ್ ಮಾಡಿಕೊಂಡು ಬರಬೇಕಾಗುತ್ತದೆ.
ಪೂಜೆಗೆ ಅವಕಾಶವಿದೆ ಅಂತ ಯೋಚಿಸದೇ ಮುನ್ನುಗ್ಗುಬೇಡಿ. ಯಾಕಂದ್ರೆ ಕೇರಳದಲ್ಲಿ ಕಳೆದೆರಡು ದಿನದಿಂದ ಭಾರಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಈಗಾಗ್ಲೇ ಹಲವರ ಜೀವಕ್ಕೂ ಹಾನಿಯಾಗಿದೆ. ಹೀಗಾಗಿ ದರ್ಶನಕ್ಕೆ ಬರುವ ಮುನ್ನ ಯೋಚಿಸಿ ಬನ್ನಿ. ಬಂದು ತೊಂದರೆಗೆ ಸಿಲುಕಬೇಡಿ ಅಂತ ತಿರುವಾಂಕೂರು ದೇವಸ್ವಂ ಮಂಡಳಿ ಭಕ್ತಾಧಿಗಳಿಗೆ ಎಚ್ಚರಿಕೆಯ ಮನವಿ ಮಾಡಿದೆ.