Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಸ್.ವರಲಕ್ಷ್ಮಿ ಅವರಿಗೆ ಪ್ರತಿಷ್ಠಿತ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ

---Advertisement---

 

ಸುದ್ದಿಒನ್,ಚಿತ್ರದುರ್ಗ. ನವೆಂಬರ್. 16 : ಅಂಗನವಾಡಿ ಕಾರ್ಯಕರ್ತೆಯರ ಸಂಘಟಕಿ, ಸಿಐಟಿಯು ನಾಯಕಿ ಎಸ್‌.ವರಲಕ್ಷ್ಮಿ ಅವರನ್ನು ಪ್ರತಿಷ್ಠಿತ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ಇಪ್ಪತ್ತೈದು ಸಾವಿರ ರು ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಡಿಸೆಂಬರ್  ತಿಂಗಳಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ರೈತ ಹೋರಾಟಗಾರ ಟಿ.ನುಲೇನೂರು ಶಂಕರಪ್ಪ ಅವರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲಾಗಿದ್ದು   ಸಾಮಾಜಿಕ, ರೈತ, ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರಿಗೆ ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಪ್ರಥಮದಲ್ಲಿ ಮಹಿಳಾ ಹೋರಾಟ ಗಾರ್ತಿಗೆ  ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಪರವಾಗಿ ಡಾ.ರವಿಶಂಕರ್ ನುಲೇನೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಸ್ ವರಲಕ್ಷ್ಮಿ ಅವರು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ವೀರಕಪುತ್ರ ಗ್ರಾಮದವರು. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಮಡಿಕೆ ತಯಾರಿಕೆ ಅವರ ಕುಟುಂಬದ ಕುಲಕಸುಬು. ಒಂದು ಹೊತ್ತಿನ ಊಟಕ್ಕೂ ಇಡೀ ಕುಟುಂಬ ದುಡಿಯಬೇಕಾಗಿದ್ದ ಸ್ಥಿತಿಯ ಕಾರಣ ಪದವಿ ವಿದ್ಯಾಭ್ಯಾಸ ಗಗನಕುಸುಮವಾಗಿತ್ತು. ಚೆನ್ನಾಗಿ ಓದಿ ಅಪ್ಪ-ಅಮ್ಮನ ಕಷ್ಟ ನಿವಾರಿಸಬೇಕೆಂದುಕೊಂಡಿದ್ದ  ವರಲಕ್ಷ್ಮಿ ಅವರ ಕನಸು ನನಸಾಗಲಿಲ್ಲ. ಆದರೆ, ಬಡತನವನ್ನು ಮೀರಬೇಕೆಂಬ ಮಹತ್ವಾಕಾಂಕ್ಷೆ, ಛಲ ಅವರನ್ನು ದಿಟ್ಟ ಹೋರಾಟಗಾರ್ತಿಯಾಗಿ ರೂಪಿಸಿತು.
ಬರಗಾಲದ ಕಾರಣ ವರಲಕ್ಷ್ಮಿ ಅವರ ಕುಟುಂಬವು ತಾಯಿಯವರ ತವರುಮನೆ ಬೆಂಗಳೂರಿನ ಕುಂಬಳುಗೋಡಿಗೆ ಬಂದು ನೆಲೆಸಿತು. ಹಣದ ತೊಂದರೆ ಇದ್ದ ಕಾರಣ ವರಲಕ್ಷ್ಮಿ ಅವರು ಕಾರ್ಖಾನೆಯೊಂದರಲ್ಲಿಕೆಲಸಕ್ಕೆ ಸೇರಿದ್ದರು. ಅಲ್ಲಿಂದ ಯೂನಿಯನ್‌ ಸಂಪರ್ಕಕ್ಕೆ ಬಂದರು.  ನಾನಾ ಹೋರಾಟಗಳಲ್ಲಿ ಭಾಗಿಯಾದ ಅವರು ಜೈಲುವಾಸವನ್ನೂ ಅನುಭವಿಸಿದರು. ಕೆಲಸ ಬಿಟ್ಟು ಪೂರ್ಣಾವಧಿಗೆ ಚಳವಳಿಯಲ್ಲಿತೊಡಗಿಸಿಕೊಳ್ಳಲು ನಿರ್ಧರಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಸಂಘಟಿಸುವ ಜವಾಬ್ದಾರಿ ಹೊತ್ತರು. 40 ಸಾವಿರ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಗೌರವಧನ ಹೆಚ್ಚಳಕ್ಕೆ ಹೋರಾಡಿ ಯಶಸ್ಸು ಕಂಡಿದ್ದು ಮರೆಯಲಾಗದ ಸಾಧನೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...