ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ : ಚಿತ್ರದುರ್ಗದ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿಗೆ ಪ್ರಥಮ ಸ್ಥಾನ

1 Min Read

 

ಸುದ್ದಿಒನ್, ಚಿತ್ರದುರ್ಗ, ಫೆ. 26 : ದಾವಣಗೆರೆಯ ವಿ.ಟಿ.ಯು. ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಪ್ಲಾಟಿನಮ್ ಜುಬಿಲಿ ಸೆಲೆಬ್ರೇಶನ್ ಉತ್ಕರ್ಷ-2026 ಅಂಗವಾಗಿ ನಡೆದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿತ್ರದುರ್ಗದ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ತಂಡವು ಪ್ರಥಮ ಸ್ಥಾನವನ್ನು ಗಳಿಸಿ 10,000/- ರೂ ನಗದು ಬಹುಮಾನ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ರೋಹಿತ್ ಕುಮಾರ್ (ತಂಡದ ನಾಯಕ), ಮಣಿ ಯಾದವ್, ರಾಹುಲ್ ನಂದನ್, ಅರುಣ್ ಕುಮಾರ್, ಸರೋಜ್ ಮಂಡಲ್, ರಥಿನ್ ಮೈಟಿ, ಅಭಿಜಿತ್ ಸಮಯ್, ಅರಿಂದಮ್ ವಿಶ್ವಾಸ್, ದರ್ಶನ್ ಲಮಾಣಿ, ತರುಣ್ ಕುಮಾರ್, ಶರಣ್ ರಾಥೋಡ್ ಬಿ ಫಾರ್ಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

 

ಪಂದ್ಯಾವಳಿಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದು, ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನವನ್ನು ನೀಡಿ ಆಯೋಜಕರ ಪ್ರಶಂಸೆಗೆ ಪಾತ್ರರಾಗಿದ್ದು, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ್, ಸದಸ್ಯರಾದ ಡಾ ಶ್ರೀ ಬಸವಕುಮಾರ ಸ್ವಾಮೀಜಿ, ಹಾಗೂ ಪ್ರಾಂಶುಪಾಲರಾದ ಡಾ ಟಿ.ಎಸ್. ನಾಗರಾಜ್ ಅವರುಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Share This Article
Enable Notifications OK No thanks