ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 11 : ಬೆಂಗಳೂರಿನ ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಪ್ರಕಟಿಸಿರುವ 2021-2025 ಬಿ.ಫಾರ್ಮ್ ಪದವಿ ಫಲಿತಾಂಶಗಳಲ್ಲಿ ನಗರದ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ಅಮೂಲ್ಯ ವಿ. ಗಾರ್ಲಪೇಟ್ ರಾಜ್ಯಕ್ಕೆ ಮೊದಲ ರ್ಯಾಂಕ್ ಹಾಗೂ ವಿವಿಧ ವಿಷಯಗಳಲ್ಲಿ ಒಟ್ಟು 21 ರ್ಯಾಂಕುಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆಂದು ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ನಾಗರಾಜ್ ತಿಳಿಸಿದ್ದಾರೆ.
ಕಾಲೇಜಿಗೆ ಒಟ್ಟು 98 ವಿ.ವಿ. ರ್ಯಾಂಕ್‍ಗಳು ಲಭಿಸಿದ್ದು, ನಂದನಾ ಎಸ್. ಅವರು ವಿವಿಧ ವಿಷಯಗಳಲ್ಲಿ 8 ರ್ಯಾಂಕ್ ಗಳಿಸಿದ್ದಾರೆ. ಹಾಗೂ ಪ್ರಜ್ವಲ್ ಎಚ್., ಭೂಮಿಕಾ ಎ., ಸುನೀಲಾ ಎನ್.ಎಸ್., ಧ್ರುವಶ್ರೀ ಟಿ.ಎಲ್. ಅವರುಗಳು ಮೂರು ವಿವಿಧ ವಿಷಯಗಳಲ್ಲಿ ರ್ಯಾಂಕ್‍ಗಳನ್ನು ಪಡೆದಿದ್ದಾರೆ. ಎರಡು ವಿಷಯಗಳಲ್ಲಿ ರ್ಯಾಂಕ್ ಪಡೆದವರು : ಅಕ್ಷಿತಾ ಎಂ., ಕಾವಟಗೆ ಸುಪ್ರಿಯಾ, ಸುಕನ್ಯಾ, ದೀಪು ವಿ., ಹರ್ಷ ಆರ್., ಲಾವಣ್ಯ ಯು., ರಮ್ಯಾ ಎಸ್.ಪಿ., ತಿತ್ಲಿ ಬಿರಿಂಗ್, ರಕ್ಷಿತಾ ಎಂ., ತೇಜಸ್ವಿನಿ ರಾಮಪ್ಪ ಅಬ್ಬಿಗೇರಿ, ಸುಷ್ಮಿತಾ ಸಿ. ಅವರು ಸಾಧನೆ ಮಾಡಿದ್ದಾರೆ.
ವಿವಿಧ ವಿಷಯಗಳಲ್ಲಿ ರ್ಯಾಂಕ್ ಪಡೆದವರು : ಶಂಕರ್ ಟಿ.ಆರ್., ನಿತ್ಯಶ್ರೀ ಜೆ.ಎಸ್., ಸೈಯದ ಆಯಿಷಾ ಸಿದ್ದಿಖಾ, ಪವನ್ ವರ್ಮಾ ಆರ್., ಮಲ್ಲಿಕಾರ್ಜುನ ಸಿ. ಪಾಟೀಲï, ತರುಣಗೌಡ ಎ.ಎನ್., ರಂಜಿತಾ ಎಸ್., ಆಕಾಶ್ ಜಿ.ಎನ್., ದಯಾನಂದ ಆರ್., ನೀಲಪ್ಪ ಎ.ಸಿ., ಮನೋಜ್ ಕೆ.ಬಿ., ಅಭಿಲಾಷ್ ಡಿ.ಜಿ., ಗವಿಸಿದ್ದ ರೆಡ್ಡಿ ವೈ., ಪ್ರಿಯಾಂಕ ಶಿವಾನಂದ ಸಂಸುದ್ದಿ, ವಿನಾಯಕ ಟಿ., ಸಿದ್ದೇಶ್ವರ ಗೌಡ ಎಸ್., ಮೇಘಾ ಎಚ್.ಎಂ., ಗೊಲ್ಲ ಮಂಜುನಾಥ, ಅಜರುದ್ದೀನ್ ಟಿ.ಎಸ್., ರೌನಕ್ ಅಹಮ್ಮದ್, ಶಿಫಾ ಎಂ.ಎಸ್., ಕಾಂತರಾಜ ಎಂ., ಯಶವಂತ್ ಟಿ., ಜಯಂತ್ ಎಂ.ಎಂ., ಸಪ್ತಮಿ ಟಿ., ಕೀರ್ತನಾ ಎಂ.ಟಿ., ಅಶೋಕ್ ಪಾಟೀಲ್ ಎಂ.ಪಿ., ಸುಹಾಸ್ ಎ.ಎನ್., ಅಮೃತಾ ಎಂ., ವಿಷ್ಣು ಪಿ.ಎಸ್., ರಕ್ಷಿತಾ ಜಿ.ಬಿ., ಜೈರಾಜ್ ಕುಮಾರ್ ಶೆಟ್ಟರ್ ಟಿ.ಎಸ್., ಅಮೂಲ್ಯ ಎಚ್.ಎಸ್., ಸಿಂಧೂ ಬಿ ಕುಂಬಾರ, ಅಮೂಲ್ಯ ಎಚ್.ಎಸ್., ದಶಮಿ ಜಿ.ಕೆ.
ವಿಶ್ವವಿದ್ಯಾಲಯದಿಂದ ಅತಿಹೆಚ್ಚು ರ್ಯಾಂಕ್ ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವ ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಕಾಲೇಜಿನ ಉತ್ತಮ ಶೈಕ್ಷಣಿಕ ವಾತಾವರಣವೇ ಈ ಸಾಧನೆಗೆ ಕಾರಣ.
ಈ ಸಾಧನೆಯ ಮೂಲಕ ಎಸ್.ಜೆ.ಎಂ ಕಾಲೇಜ್ ಆಫ್ ಫಾರ್ಮಸಿ ಸಂಸ್ಥೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಮೇಲುಗೈಯನ್ನು ಸಾಬೀತುಪಡಿಸಿದೆ. ವಿದ್ಯಾರ್ಥಿಗಳ ಈ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ. ಕಳಸದ್ ಹಾಗೂ ಸದಸ್ಯರಾದ ಶ್ರೀ ಬಸವಕುಮಾರ ಸ್ವಾಮೀಜಿ. ಡಾ|| ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಹಾಗೂ ಕಾಲೇಜಿನ ಪ್ರಾಚಾರ್ಯರು ರ‌್ಯಾಂಕ್ ವಿದ್ಯಾರ್ಥಿಗಳಿಗೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದಿಸಿದ್ದಾರೆ.






