ಭಾರತಕ್ಕೂ ಮೊದಲೇ ರಷ್ಯಾದ ಲೂನಾ 25 ಚಂದ್ರನನ್ನು ತಲುಪುತ್ತೆ ಎನ್ನಲಾಗ್ತಾ ಇತ್ತು. ಆದ್ರೆ ಆ ಯೋಜನೆ ಇದೀಗ ವಿಫಲವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಬೇಕಿದ್ದ ರಷ್ಯಾದ ನೌಕೆ ತನ್ನ ಸಂಪರ್ಕ ಕಳೆದುಕೊಂಡಿದೆ. ರಷ್ಯಾದ ಬಹುನಿರೀಕ್ಷಿತ ಯೋಜನೆ ಈ ಮೂಲಕ ವಿಫಲವಾಗಿದೆ.
ತನ್ನ ನೌಕೆ ವಿಫಲಗೊಂಡಿದ್ದನ್ನು ರಷ್ಯಾದ ಬಾಹ್ಯಾಕಾಶ ನೌಕೆ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಆಗಸ್ಟ್ 11ರಂದು ರಷ್ಯಾದ ಚಂದ್ರಯಾನ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಬರೋಬ್ಬರಿ 47 ವರ್ಷಗಳ ಬಳಿಕ ರಷ್ಯಾ ತನ್ನ ನೌಕೆಯನ್ನು ಚಂದ್ರನ ಬಳಿ ಕಳುಹಿಸಲಾಗಿತ್ತು. ನಿನ್ನೆಯೇ ನೌಕೆ ತನ್ನ ಸಂಪರ್ಕ ಕಳೆದುಕೊಂಡಿತ್ತು. ಇದನ್ನು ರಷ್ಯಾ ಇಂದು ಖಚಿತಪಡಿಸಿದೆ.
ಇನ್ನು ಭಾರತದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 3 ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಎರಡನೇ ಮತ್ತು ಅಂತಿಮ ಹಂತದ ಡೀಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಇಸ್ರೋ ಹೇಳಿದೆ.