ಕೀವ್ : ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಕ್ಷಿಪಣಿ ದಾಳಿಯನ್ನು ಮುಂದುವರೆಸುತ್ತಿವೆ. ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿರುವ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಸುಮಾರು ಐದು ಅಂತಸ್ತಿನ ಅಪಾರ್ಟ್ ಮೆಂಟ್ ಗೆ ತೀವ್ರ ಹಾನಿಯಾಗಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತುರ್ತು ಸೇವೆಗಳು ತಿಳಿಸಿವೆ. ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊದಲಿನಿಂದಲೂ ರಷ್ಯಾ ಉಕ್ರೇನ್‌ನಲ್ಲಿರುವ ಸೇನಾ ನೆಲೆಗಳನ್ನು ತನ್ನ ಗುರಿ ಎಂದು ಹೇಳಿಕೊಂಡಿತ್ತು ಆದರೆ ಈಗ ಅದು ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ.ಈ ಮೂಲಕ ರಷ್ಯಾ ಮಾತು ತಪ್ಪಿದೆ.
ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ, ರಷ್ಯಾದ ಮಿಲಿಟರಿ ರಾಜಧಾನಿ ಕೀವ್‌ನಲ್ಲಿರುವ ದೊಡ್ಡ ಕಟ್ಟಡದ ಮೇಲೆ ಕ್ಷಿಪಣಿಯನ್ನು ಉಡಾಯಿಸಿದ್ದಾರೆ. ರಷ್ಯಾದ ಪಡೆಗಳು ರಾತ್ರಿಯ ಸಮಯದಲ್ಲಿ ಸರಣಿ ದಾಳಿಗಳನ್ನು ಪ್ರಾರಂಭಿಸಿರುವುದರಿಂದ ಇಲ್ಲಿ “ಭಯಾನಕ ಪರಿಸ್ಥಿತಿ ಎದುರಾಗಿದೆ. ಕೀವ್‌ಗೆ ಪ್ರವೇಶಿಸಲು ರಷ್ಯಾದ ಸೈನ್ಯವು ಎಲ್ಲಾ ದಿಕ್ಕುಗಳಿಂದಲೂ ದಾಳಿ ಮಾಡುತ್ತಿದೆ ಎಂದು ಅವರು ಹೇಳಿದರು.
ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಅವರು ಟ್ವಿಟರ್‌ನಲ್ಲಿ ಹಾನಿಗೊಳಗಾದ ಅಪಾರ್ಟ್ಮೆಂಟ್ನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Caught on camera: https://t.co/q1PHiRqGXz
— Dr. Jason Martineau (@jasonamartineau) February 26, 2022
ಶಾಂತಿಯುತ ನಗರವಾದ ಕೀವ್ ರಷ್ಯಾದ ಕ್ಷಿಪಣಿ ದಾಳಿಯಿಂದ ತತ್ತರಿಸಿ ಹೋಗಿದೆ. ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಅವರು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.