ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಉಭಯ ದೇಶಗಳ ಸೈನಿಕರು ತಮ್ಮ ಹೋರಾಟದ ಪರಾಕ್ರಮ ತೋರುತ್ತಿದ್ದಾರೆ. ಏತನ್ಮಧ್ಯೆ, ಮಾತುಕತೆಗೆ ಸಿದ್ಧತೆ ನಡೆಸುತ್ತಿರುವ ರಷ್ಯಾ ತನ್ನ ಆಕ್ರಮಣವನ್ನು ಮುಂದುವರೆಸಿದೆ.
ಉಕ್ರೇನ್‌ನೊಂದಿಗೆ ಮಾತುಕತೆಗಾಗಿ ಬೆಲಾರಸ್‌ನಲ್ಲಿರುವ ಗೊಮೆಲ್‌ಗೆ ನಿಯೋಗವನ್ನು ಕಳುಹಿಸುವುದಾಗಿ ರಷ್ಯಾ ಘೋಷಿಸಿದೆ.
ರಷ್ಯಾ ಜತೆ ಮಾತುಕತೆಗೆ ಸಿದ್ಧ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ಬೆಲಾರಸ್ ನಿಂದಲೇ ಉಕ್ರೇನ್ ಮೇಲೆ ಯುದ್ದ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಯುದ್ಧದ ವಾತಾವರಣ ಇಲ್ಲದ ಪ್ರದೇಶದಲ್ಲಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು. ವಾರ್ಸಾ, ಇಸ್ತಾಂಬುಲ್, ಬಾಕು ಈ ಪ್ರದೇಶಗಳಲ್ಲಿ ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ ಎಂದು ಘೋಷಿಸಿದರು.
ರಷ್ಯಾ ಯುದ್ಧವನ್ನು ನೇರವಾಗಿ ಮಾಡದೆ ಮಾತು ತಪ್ಪಿದೆ. ಉಕ್ರೇನಿಯನ್ ಜನರ ಮನೆಗಳ ಮೇಲೆ ದಾಳಿ ನಡೆಸಿದ್ದಕ್ಕಾಗಿ ರಷ್ಯಾದ ಸೇನೆಯನ್ನು ಟೀಕಿಸಿದರು. ಈ ದಾಳಿಯಲ್ಲಿ ಅಮಾಯಕ ಜನರು ಸಾವನ್ನಪ್ಪುತ್ತಿದ್ದಾರೆ. ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೇ ಗಾಯಗೊಂಡವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ಮೇಲೆ ದಾಳಿ ಮಾಡಲಾಗಿದೆ. ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.