ಉಕ್ರೇನ್ ಮೇಲೆ ಕೆಂಗಣ್ಣು ಬೀರಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ.

ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿಯೊಂದಿಗೆ ರಷ್ಯಾದ ಪಡೆಗಳು ವೇಗವಾಗಿ ಮುನ್ನಡೆಯುತ್ತಿವೆ. ರಷ್ಯಾದ ಪಡೆಗಳನ್ನು ತಡೆಯಲು ಉಕ್ರೇನ್ ಮಾಡಿದ ಪ್ರಯತ್ನಗಳು ವ್ಯರ್ಥವಾಗಿವೆ. ಯುದ್ಧದ ಎರಡನೇ ದಿನ, ರಷ್ಯಾದ ಪಡೆಗಳು ಉಕ್ರೇನಿಯನ್ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಂಡಿವೆ.

ಮುಖ್ಯವಾಗಿ ರಾಜಧಾನಿ ಕೀವ್ ಅನ್ನು ಗುರಿಯಾಗಿಸಿಕೊಂಡಿರುವ ರಷ್ಯಾ, ಎಲ್ಲಾ ಕಡೆಯಿಂದ ಸುತ್ತುವರೆದು ಆಕ್ರಮಿಸಿಕೊಂಡಿದೆ. ಇದನ್ನು ಅಧಿಕೃತವಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘೋಷಿಸಿದ್ದಾರೆ.
ರಾಜಧಾನಿ ಕೀವ್ ಇನ್ನೂ 96 ಗಂಟೆಗಳಲ್ಲಿ ರಷ್ಯಾದ ಕೈಗೆ ಹೋಗುತ್ತದೆ ಎಂದು ಅವರು ಹೇಳಿದರು. ವೈಮಾನಿಕ ದಾಳಿಯ ಅಪಾಯವಿದೆ ಎಂದ ಅವರು, ಸುರಕ್ಷಿತ ಪ್ರದೇಶಗಳಲ್ಲಿ ಅಡಗಿಕೊಳ್ಳುವಂತೆ ಸಲಹೆ ನೀಡಿದರು. ನನನ್ನು ಕೊಲ್ಲುವುದೇ ರಷ್ಯಾದ ಗುರಿಯಾಗಿದ್ದು, ಅಷ್ಟೇ ಅಲ್ಲದೇ ನನ್ನ ಕುಟುಂಬದವರನ್ನು ಹತ್ಯೆ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.


