ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದೆ. ಆದ್ರೆ ಉಕ್ರೇನ್ ಗೆ ಭಾರತ ಸೇರಿದಂತೆ ಹಲವು ದೇಶಗಳಿಂದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿದ್ದಾರೆ. ಸದ್ಯ ಆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತ ಸರ್ಕಾರ ಕೂಡ ಸಾಕಷ್ಟು ನಿರಂತರ ಪ್ರಯತ್ನ ಮಾಡುತ್ತಿದೆ. ಅಲ್ಲಿರುವ ನಮ್ಮ ಕನ್ನಡಿಗರನ್ನ ಕರೆತರಲು. ಇದೀಗ ಬೇರೆ ದೇಶಗಳ ವಿದ್ಯಾರ್ಥಿಗಳ ರಕ್ಷಣೆಗೆ ಸ್ವತಃ ರಷ್ಯಾ ದೇಶವೇ ಮುಂದಾಗಿದೆ.
ಬೇರೆ ಬೇರೆ ದೇಶದ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ರಷ್ಯಾ ಬಸ್ಸುಗಳ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. 130 ಬಸ್ ಗಳನ್ನ ವ್ಯವಸ್ಥೆ ಮಾಡಿದ್ದು, ಖಾರ್ಕಿವ್ ಮತ್ತು ಸುಮಿ ಸ್ಥಳದಿಂದ ಭಾರತ ಮತ್ತು ವಿದೇಶಿ ವಿದ್ಯಾರ್ಥಿಗಳನ್ನ ಆ ಸ್ಥಳದಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನ ಕರೆತಂದ ಬಳಿಕ ತಾತ್ಕಾಲಿಕವಾಗಿ ಇರಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ರಷ್ಯಾದ ಬಾರ್ಡರ್ ನಿಂದ ಬಳಿಕ ವಿದ್ಯಾರ್ಥಿಗಳನ್ನ ಏರ್ ಲಿಫ್ಟ್ ಮಾಡಲಾಗುತ್ತಿದೆ. ಇನ್ನು ಇದರ ಜೊತೆಗೆ ಭಾರತ ಸರ್ಕಾರ್ ಆಪರೇಷನ್ ಗಂಗಾ ಮೂಲಕ ಉಕ್ರೇನ್ ನಿಂದಲೂ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ನೆರವೇರುತ್ತಲೆ ಇದೆ. ಸಾಕಷ್ಡು ಜನ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಆದ್ರೆ ಈ ಮಧ್ಯೆ ನವೀನ್ ಎಂಬ ವಿದ್ಯಾರ್ಥಿ ರಷ್ಯಾ ದಾಳಿಗೆ ಬಲಿಯಾಗಿದ್ದಾರೆ.