ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರಗೊಳ್ಳುತ್ತಿದೆ. ಅಲ್ಲಿರುವ ವಿದ್ಯಾರ್ಥಿಗಳನ್ನ ಭಾರತಕ್ಕೆ ವಾಪಾಸ್ ಕರೆತರಲು ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿದೆ. ಈ ನಡುವೆ ಅಲ್ಲಿನ ವಿದ್ಯಾರ್ಥಿಗಳನ್ನ ಉಕ್ರೇನ್ ಒತ್ತೆಯಾಳಾಗಿಸಿಕೊಂಡಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ. ಈ ಆರೋಪಕ್ಕೆ ಉಕ್ರೇನ್ ಕೂಡ ಪ್ರತ್ಯಾರೋಪ ಮಾಡಿದೆ.
ರಷ್ಯನ್ ಫೆಡರೇಷನ್ ತನ್ನ ಹಗೆತನವನ್ನ ಈ ಕೂಡಲೇ ನಿಲ್ಲಿಸಬೇಕು. ರಷ್ಯ ಹಗೆತನ ಬಿಟ್ಟರೆ ಖಾರ್ಕೀವ್ ನಗರದಲ್ಲಿರುವ ನಾಗರಿಕರು ಮತ್ತು ವಿದ್ಯಾರ್ಥಿಗಳನ್ನ ಉಕ್ರೇನ್ ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬಹುದು. ರಷ್ಯಾ ಶೆಲ್ ದಾಳಿ ನಡೆಸಯತ್ತಿಉವ ಕಾರಣ ಯಾರು ಕೂಡ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ರಷ್ಯಾ ಸೇನೆ, ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರೆ ದೇಶಗಳ ವಿದ್ಯಾರ್ಥಿಗಳನ್ನ ಒತ್ತೆಯಾಳಾಗಿಸಿಕೊಂಡಿದೆ. ಹೀಗಾಗಿ ಎಲ್ಲರಿಗೂ ನಾವೂ ತುರ್ತು ಕರೆ ನೀಡಿದ್ದೆವೆ ಎಂದು ಉಕ್ರೇನ್ ತಿಳಿಸಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಭಾರತ, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಜೊತೆ ಭಾರತೀಯ ರಾಯಭಾರಿ ನಿರಂತರ ಸಂಪರ್ಕದಲ್ಲಿದ್ದಾರೆ. ನಮ್ಮ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನ ರಷ್ಯಾ ಆಗಲಿ, ಉಕ್ರೇನ್ ಆಗಲು ಒತ್ತಾಯಿಗಿಸಿಕೊಂಡಿರುವ ಯಾವುದೇ ಮಾಹಿತಿ ಇಲ್ಲ. ಸದ್ಯ ಎಲ್ಲರನ್ನ ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿದ್ದೇವೆ ಎಂದಿದೆ.