ಚಿತ್ರದುರ್ಗ, (ನವೆಂಬರ್.23) : ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಥಾತ್ಮಕವಾಗಿ ಸಾಧನೆಗೈಯಲು ಅನುಕೂಲವಿರುವ ಎಲ್ಲ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದು ರೋಟರಿ ಸಂಸ್ಥೆ ಅಧ್ಯಕ್ಷರಾದ ರಾಜೇಶ್ವರಿ ಸಿದ್ರಾಮ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್ ಗ್ರಾಮದ ಯಶೋಧರಮ್ಮ ಬೋರಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಬಿಸಿಯೂಟಕ್ಕಾಗಿ ಉಚಿತ ನೂರು ತಟ್ಟೆ ಮತ್ತು ಲೋಟ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆ ಪದಾಧಿಕಾರಿ ವೀರೇಶ್ ಮಾತನಾಡಿ, ಶಿಕ್ಷಣದ ಅಗತ್ಯತೆ ಬಗ್ಗೆ ಹಾಗೂ ಅದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಿದರು.ರೋಟರಿ ಸಂಸ್ಥೆ ಪದಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ ರೋಟರಿ ಸಂಸ್ಥೆ ಬೆಳೆದು ಬಂದ ಬಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳಾದ ವೀರಭದ್ರ ಸ್ವಾಮಿ, ತಟ್ಟೆಲೋಟ ದಾನಿಗಳಾದ ಶ್ರೀಮುಖೇಶ್ ವಸ್ತ್ರವೈಭವ ಎಂಟರ್ ಪ್ರೈಸಸ್ ಹಾಗೂ ರಾಘವೇಂದ್ರ ಸ್ಟೋರ್‍ನ ಮಾಲೀಕರಾದ ರಾಧಿಕಾ ಗಿರೀಶ್, ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಆರ್.ನಾಗರಾಜ್, ಶಿಕ್ಷಕರಾದ ಗುರುದೇವಣ್ಣ, ಡಿ.ಹರೀಶ್, ಬಿ.ಟಿ.ಓಬಳೇಶ್, ಜಿ.ಕೆ.ಮುರಿಗೆಪ್ಪ, ಹೆಚ್.ಸಿ.ಬಸವರಾಜಪ್ಪ, ಬಂಜಯ್ಯ, ಸೌಮ್ಯ, ಬೋರಣ್ಣ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.