ನಿಜವಾಗಿದೆ ಹಾರ್ದಿಕ್ ಪಾಂಡ್ಯಾ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿ : ಡಿವೋರ್ಸ್ ಸುದ್ದಿ ಒಪ್ಪಿಕೊಂಡ ಆಟಗಾರ

ಕಳೆದ ಕೆಲವು ತಿಂಗಳಿನಿಂದ ಹಾರ್ದಿಕ್ ಪಾಂಡ್ಯಾ ಹಾಗೂ ನಟಾಶ ನಡುವೆ ಏನು ಸರಿ ಇಲ್ಲ ಎಂಬಂತ ವಿಚಾರ ಸುದ್ದಿಯಲ್ಲಿತ್ತು. ಇಬ್ಬರು ದೂರವಾಗ್ತಾ ಇದ್ದಾರೆ ಎಂಬ ಮಾತು ಕೇಳಿ ಬರುತ್ತಾ ಇತ್ತು. ಇದೀಗ ಪಾಂಡ್ಯಾ ಬದುಕಲ್ಲಿ ಬೀಸಿದ್ದ ಬಿರುಗಾಳಿ ಸತ್ಯವಾಗಿದೆ. ಹಾರ್ದಿಕ್ ಪಾಂಡ್ಯಾ ತಮ್ಮ ಡಿವೋರ್ಸ್ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.

 

ಹಾರ್ದಿಕ್ ಪಾಂಡ್ಯ ಐಪಿಎಲ್ ನಲ್ಲಿ ಬ್ಯುಯಿ ಇದ್ದಾಗಲೇ ಈ ಥರದ ವಿಚಾರ ಸುದ್ದಿಯಾಗಿತ್ತು. ಹಾರ್ದಿಕ್ ಪಾಂಡ್ಯ ಹಾಗೂ ನಟಾಶ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. ಡಿವೋರ್ಸ್ ಬಗ್ಗೆ ಘೋಷಣೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ವಿಶ್ವಕಪ್ ನಲ್ಲಿ ಅದ್ಭುತವಾಗಿ ಆಟ ಪ್ರದರ್ಶನ ಮಾಡಿದಾಗಲೂ ಹೆಂಡತಿ ಬಂದಿರಲಿಲ್ಲ. ಮನೆಗೆ ಬಂದು ಅದ್ದೂರಿಯಾಗಿ ಆಚರಣೆ ಮಾಡಿದಾಗಲು ಹೆಂಡತಿಯ ಸುಳಿವಿರಲ್ಲ. ಬರೀ ಮಗನ ಜೊತೆಗೇನೆ ಫೋಟೋ ಹಾಕಿದ್ದರು. ಆಗಲೂ ಇಬ್ಬರು ದೂರ ದೂರ ಎಂಬ ಸುದ್ದಿ ಹಬ್ಬಿತ್ತು.

ಈ ಬಗ್ಗೆ ಹಾರ್ದಿಕ್ ಪಾಂಡ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, 4 ವರ್ಷಗಳ ಒಟ್ಟಿಗೆ ಬಾಳಿದ ನಂತರ, ನಟಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ಒಟ್ಟಾಗಿ ಬಾಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ನಮ್ಮಿಬ್ಬರ ಹಿತದೃಷ್ಟಿಯಿಂದ, ನಾವು ಒಟ್ಟಾಗಿ ಅನುಭವಿಸಿದ ಸಂತೋಷ, ಪರಸ್ಪರ ಗೌರವ, ಒಡನಾಟ ಮತ್ತು ನಾವು ಕುಟುಂಬವಾಗಿ ಬೆಳೆದ ರೀತಿಯನ್ನ ನೋಡಿದಾಗ ಇದು ನಮಗೆ ಕಠಿಣ ನಿರ್ಧಾರವಾಗಿತ್ತು. ನಮ್ಮ ಮಗ ಅಗಸ್ತ್ಯ ಇಬ್ಬರ ಜೀವನದಲ್ಲೂ ಇನ್ಮುಂದೆ ಇರಲಿದ್ದಾನೆ. ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವ ಪೋಷಕರಾಗಿರುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *