RSS ಪಥ ಸಂಚಲನ : ಹೈಕೋರ್ಟ್ ನಲ್ಲಿ ಮತ್ತೆ ಸರ್ಕಾರಕ್ಕೆ ಹಿನ್ನಡೆ : ಡಿಕೆಶಿ ಫಸ್ಟ್ ರಿಯಾಕ್ಷನ್

1 Min Read

ಬೆಂಗಳೂರು: ಆರ್ ಎಸ್ ಎಸ್ ಪಥ ಸಂಚಲನ ಮಾಡಬೇಕು ಅಂದ್ರೆ ಸರ್ಕಾರದ ಅನುಮತಿ ಪಡೆಯಲೇಬೇಕು ಎಂಬ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಅಷ್ಟೇ ಅಲ್ಲ ಸರ್ಕಾರಿ ಹುದ್ದೆಯಲ್ಲಿರುವವರು ಯಾರು ಕೂಡ ಆರ್ ಎಸ್ ಎಸ್ ಪಥದಲ್ಲಿ ಭಾಗಿಯಾಗಬಾರದು ಎಂಬುದನ್ನು ತಿಳಿಸಿದ್ದರು. ಆದೇಶವನ್ನು ಲೆಕ್ಕಿಸದೆ ಭಾಗಿಯಾದ ಸರ್ಕಾರಿ ನೌಕರರನ್ನು ಈಗಾಗಲೇ ಅಮಾನತು ಕೂಡ ಮಾಡಿದೆ. ಸರ್ಕಾರದ ನಿರ್ಧಾರದ ವಿರುದ್ಧ ಆರ್ ಎಸ್ ಎಸ್ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮತ್ತೆ ಹೈಕೋರ್ಟ್ ನಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಿಂಗಲ್ ಬೇಂಚ್ ಅಂದ್ರೆ ಯಾವುದು ಸ್ಟೇ ಕೊಟ್ಟಿದ್ದರೋ ಅಲ್ಲಿಯೇ ಹೋಗಿ ಎಂದು ತಿಳಿಸಿದೆ.

ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಮಾತನಾಡಿದ್ದು, ಆರ್ ಎಸ್ ಎಸ್ ನಿಯಂತ್ರಣ ಅಂತ ನಾವೆಲ್ಲಿ ಹೇಳಿದ್ದೀವಿ. ಅನುಮತಿ ತಗೋಳ್ಳಬೇಕು ಅಂತ ಅಷ್ಟೇ ಹೇಳಿದ್ದೀವಿ. ಆರ್ ಎಸ್ ಎಸ್ ಸುದ್ದಿಯನ್ನೇ ಎಲ್ಲೂ ಮಾತನಾಡಿಲ್ಲ. ಇಶ್ಯೂ ಇತ್ತು. ಸಾಮಾನ್ಯವಾಗಿ ಯಾರೇ ಕಾರ್ಯಕ್ರಮ ಮಾಡಬೇಕಾದ್ರೂ ಅನುಮತಿ ಪಡೆಯಬೇಕು ಅನ್ನೋದು ಇದೆ. ಈ ಸಂಬಂಧ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ.

ಜಗದೀಶ್ ಶೆಟ್ಟರ್ ಅವರು ನಿಯಮ ಪಾಲನೆ ಮಾಡಿದ್ದರಲ್ಲ ಆ ನಿಯಮಕ್ಕೆ ನಾವೂ ಪುನರ್ ಉಚ್ಛಾರ ಮಾಡಿದೆವು. ಅದನ್ನ ಬಿಟ್ಟು ಬೇರೆ ಏನು ಇಲ್ಲ. ಆರ್ ಎಸ್ ಎಸ್ ಮಾಡಬಾರದು ಅಂತ ನಾವೂ ಎಲ್ಲಿಯೂ ಹೇಳಿಲ್ಲ ಅಲ್ವಾ. ಸರ್ಕಾರಕ್ಕೆ ಹಿನ್ನಡೆ ಅಂತ ಏನಿಲ್ಲ. ನಾವೂ ಕೋರ್ಟ್ ಗೂ ಗೌರವ ಕೊಡದೆ ಇರ್ತೀವಾ..? ನ್ಯಾಯಾಲಯಕ್ಕೆ ಯಾವಾಗಲೂ ಗೌರವ ಕೊಡ್ತೇವೆ ಎಂದಿದ್ದಾರೆ.

Share This Article
Enable Notifications OK No thanks