in

ಗಾಂಧಿ ಹತ್ಯೆ ಸಂಭ್ರಮಿಸುವ RSS ದೇಶಪ್ರೇಮಿ ಸಂಘಟನೆಯಾಗಲಾರದು : ಕಾಂಗ್ರೆಸ್

suddione whatsapp group join

ಬೆಂಗಳೂರು: RSS ಸಂಘಟನೆ ಬಗ್ಗೆ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ. ಸಾಲು ಸಾಲು ಟ್ವೀಟ್ ಮಾಡಿರುವ ಕಾಂಗ್ರೆಸ್, ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ RSS ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು ಎಂದಿದೆ.

🔹ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುತ್ತಾ ಬ್ರಿಟೀಷರ ಸೈನ್ಯ ಸೇರಲು RSS ತುದಿಗಾಲಲ್ಲಿ ನಿಂತಿರಲಿಲ್ಲವೇ?

ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರಿಗೆ ಹಿಡಿದುಕೊಡುತ್ತಿದ್ದ RSS ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು?

🔹 ಈ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಬಾಪೂಜೀ ಮಹಾತ್ಮ ಗಾಂಧಿಯವರು ಸತ್ತ ದಿನ ಸಿಹಿ ಹಂಚಿದ ಗುಳ್ಳೆನರಿ RSS ಹೇಗೆ ತಾನೇ ದೇಶಪ್ರೇಮಿ ಸಂಘಟನೆಯಾಗಬಲ್ಲದು?

🔹 RSS ಮುಖವಾಣಿ ಆರ್ಗನೈಸರ್ 1970 ಜನವರಿ 11 ರಂದು ತನ್ನ ಸಂಪಾದಕೀಯದಲ್ಲಿ ಗಾಂಧಿಯವರ ಬಗ್ಗೆ ವಿಷಪೂರಿತ ಲೇಖನ ಪ್ರಕಟಿಸಿರಲಿಲ್ಲವೇ?

RSS ಈ ದೇಶಕ್ಕೆ ದ್ರೋಹ ಬಗೆದ ಸಂಘಟನೆ ಎಂಬುದಕ್ಕೆ ಒಂದಷ್ಟು ನಿದರ್ಶನಗಳು :

🔹 1929 ರ ಲಾಹೋರ್ ಅಧಿವೇಶನದಲ್ಲಿ ಅಂದಿನ ಅಧ್ಯಕ್ಷರಾದ ಜವಾಹರಲಾಲ್ ನೆಹರೂರವರು ದೇಶದ ಎಲ್ಲಾ ಸಂಸ್ಥೆಗಳ ಮೇಲೆ 1930 ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆಕೊಡುತ್ತಾರೆ ಇದನ್ನು ನಿರಾಕರಿಸಿದ RSS ತನ್ನ ಸಂಘದ ಕಛೇರಿಯ ಮೇಲೆ ಭಗವಾಧ್ವಜ ಹಾರಿಸುತ್ತದೆ.

🔹 ಅಷ್ಟೇ ಅಲ್ಲದೆ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಾ 3 ಬಣ್ಣಗಳುಳ್ಳ ಧ್ವಜ ಅನಿಷ್ಟದ ಸಂಕೇತ ಎಂದು RSS ತನ್ನ ಮುಖವಾಣಿ “ಆರ್ಗನೈಸರ್” ಅಲ್ಲಿ ಬರೆಯುತ್ತದೆ.

🔹 55 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಗೌರವ ನೀಡದೆ ತನ್ನ ಸಂಘದ ಕಛೇರಿಯ ಮೇಲೆ ತ್ರಿವರ್ಣ ಧ್ವಜದ ಬದಲಾಗಿ ಭಗವಾಧ್ವಜ ಹಾರಿಸುತ್ತದೆ ಎಂದು ಸಾಲು ಸಾಲು ಟ್ವೀಟ್ ಮಾಡಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ: ಟಿಕೆಟ್ ಆಕಾಂಕ್ಷಿಯಾಗಿದ್ದರಾ ಚಂದ್ರು..?

ಕಾಂಗ್ರೆಸ್ ಟ್ವೀಟ್ ಗೆ ಶಾಸಕ ರೇಣುಕಾಚಾರ್ಯ ಹೇಳಿದ್ದು ಹೀಗೆ..!