in

ರೋಟರಿ ಕ್ಲಬ್‌ ವತಿಯಿಂದ ಪವಿತ್ರ ರಂಜಾನ್‌ ಉಪವಾಸ ಮುಸ್ಲಿಂ ಬಾಂಧವರಿಗೆ ಹಣ್ಣು ಹಂಪಲು ವಿತರಣೆ

suddione whatsapp group join

 

 

ಚಿತ್ರದುರ್ಗ : ನಗರದ ಅಗಸನಕಲ್ಲು ಮಸ್ ಜಿದ್ ಎ-ಉಸ್ಮಾನಿಯಾ   ಮಸೀದಿಯ ಮುಂಭಾಗದಲ್ಲಿ ಪವಿತ್ರ ರಂಜಾನ್‌  ಉಪವಾಸ ಇರುವ ಮುಸ್ಲಿಂ ಬಾಂಧವರಿಗೆ “ಭಾವಕೈತೆಯ ಸಂಕೇತವಾಗಿ” ಹಣ್ಣು ಹಂಪಲುಗಳನ್ನು ಚಿತ್ರದುರ್ಗ ಚಿನ್ನೂಲಾದ್ರಿ ರೋಟರಿ ಕ್ಲಬ್‌ ವತಿಯಿಂದ ಮುಸ್ಲಿಂ ಭಾಂದವರಿಗೆ ವಿತರಣೆಯನ್ನು ರೋಟರಿ ಅಧ್ಯಕ್ಷರಾದ ಈ.ಅರುಣ್‌ಕುಮಾರ್‌ ಹಾಗೂ ಪದಾಧಿಕಾರಿಗಳಾದ ವಿತರಿಸಿದರು.

ನಂತರದಲ್ಲಿ ಮಾತನಾಡಿದ ಅಧ್ಯಕ್ಷರಾದ ಈ.ಅರುಣ್‌ಕುಮಾರ್‌  ಜಗತ್ತಿನ ಮುಸಲ್ಮಾನರು ಈಗಾಗಲೇ ಪವಿತ್ರ ರಮ್ಜಾನ್‌ ತಿಂಗಳನ್ನು ಸ್ವಾಗತಿಸಿ, ಉಪವಾಸ ವ್ರತ ಆಚರಿಸುತ್ತಿದ್ದಾರೆ. ಸೂರ್ಯೋದಯಕ್ಕಿಂತ ಒಂದು- ಒಂದೂವರೆ ಗಂಟೆ ಮೊದಲೇ ಅನ್ನಾಹಾರ ಮುಗಿಸುತ್ತಾರೆ.

ಸಂಜೆ ಸೂರ್ಯಾಸ್ತದ ನಂತರವೇ ಉಪವಾಸ ಬಿಟ್ಟು ಅನ್ನ ಪಾನೀಯ ಸೇವಿಸುತ್ತಾರೆ. ಇದು ಹೊಟ್ಟೆ ಹಸಿವು ಬಾಯಾರಿಕೆಗೆ ಪಾತ್ರ ಸೀಮಿತವಾಗಿರದೆ, ಎಲ್ಲ ಕೆಡುಕುಗಳಿಂದಲೂ ದೂರ ಇರಬೇಕು. ದೇವರ ಭಯ ಮತ್ತು ಭಕ್ತಿಯ ಜೀವನ ನಡೆಸಲು ರಮ್ಜಾನ್‌ನಿಂದ ಪ್ರೇರಣೆ ಪಡೆಯಬೇಕು ಎನ್ನುತ್ತದೆ ಉಪವಾಸ ಆಚರಣೆ ಉದ್ದೇಶ. ರಮ್ಜಾನ್‌ ಮಹಾನತೆ ಮತ್ತು ಸಮೃದ್ಧಿಯ ತಿಂಗಳು.

ಜನರು ಉಪವಾಸ ವ್ರತವನ್ನು ಮಹಾನ್‌ ಪುಣ್ಯ ಮತ್ತು ಪ್ರಯೋಜನದ ದೃಷ್ಟಿಯಲ್ಲಿ ಪೂರ್ಣ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಆಚರಿಸುತ್ತಾರೆ. ಇದೊಂದು ಅಪ್ರತಿಮ ಭಾವನೆ ಎಂಬ ವಿಶ್ವಾಸ ಮುಸ್ಲಿಮರದ್ದು. ಆದ್ದರಿಂದ ಪೂರ್ಣ ನಿಷ್ಠೆಯಿಂದ ಆಚರಿಸುತ್ತಾರೆ.

ರಮ್ಜಾನ್ ತಿಂಗಳಲ್ಲಿ ಉಪವಾಸ ವ್ರತ ಆಚರಿಸುವ 7-8 ವರ್ಷದ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲ ಮುಸಲ್ಮಾನರು, ಒಪ್ಪೊತ್ತಿನ ಊಟಕ್ಕೂ ತತ್ವಾರ ಇರುವ ಬಡವರ ಹಸಿವಿನ ಅರಿವು ಮಾಡಿಕೊಳ್ಳುತ್ತಾರೆ. ಬಡವರ ಹಸಿವು ನೀಗಿಸಲೂ ಉಪವಾಸ ಪ್ರಾಯೋಗಿಕ ಪ್ರೇರಣೆ ನೀಡುತ್ತದೆ. ವರ್ಷವಿಡೀ ನಿಯಂತ್ರಣ ಇಲ್ಲದೆ ಉಣ್ಣುವವರಿಗೆ ಉಪವಾಸ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂದು ವೈದ್ಯಲೋಕ ಹೇಳುತ್ತದೆ.

ಜೀವನ ಸಂಸ್ಕರಣೆ ತಮ್ಮ ಜೀವನವನ್ನು ಪೂರ್ಣವಾಗಿ ಸಂಸ್ಕರಿಸುವುದು ಉಪವಾಸದ ಉದ್ದೇಶ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಮುಂತಾದ ಅರಿಷಡ್ವರ್ಗಗಳ ನಿಯಂತ್ರಣ ಇದರ ಹಿಂದೆ ಅಡಗಿದ್ದು, ಉಪವಾಸಿಗ ಎಲ್ಲ ಕೆಡುಗಕುಗಳಿಂದ ದೂರ ಇರಬೇಕು ಎಂದು ಇಸ್ಲಾಮ್‌ ಕಲಿಸುತ್ತದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಸದಸ್ಯರಾದ ಶಂಕರಪ್ಪ,  ಲಕ್ಷ್ಮೀಕಾಂತ್ ಬಾಬು, ಬಸಯ್ಯ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಿದ್ಯುನ್ಮಾನ, ಸಾಮಾಜಿಕ ಜಾಲತಾಣ, ಇ-ಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಸಿದ್ಧತೆ : ಯಾರ್ಯಾರನ್ನು ಭೇಟಿ ಮಾಡಿದ್ರು ಗೊತ್ತಾ..?