ರೋಹಿತ್ ಶತಕ : ಭಾರತಕ್ಕೆ ಭರ್ಜರಿ ಗೆಲುವು….!

suddionenews
1 Min Read

ಸುದ್ದಿಒನ್ : ಭಾರತ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ, ಭಾರತ ತಂಡವು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ಈ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡ ಇಂಗ್ಲೆಂಡ್ ತಂಡವು 49.5 ಓವರ್‌ಗಳಲ್ಲಿ 304 ರನ್‌ಗಳಿಗೆ ಆಲೌಟ್ ಆಯಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ 44.3 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.

ಭಾರತದ ನಾಯಕ ರೋಹಿತ್ ಶರ್ಮಾ 119 ರನ್ ಗಳಿಸಿ ತಮ್ಮ 32 ನೇ ಏಕದಿನ ಶತಕವನ್ನು ಗಳಿಸಿದರು. ಶುಭಮನ್ ಗಿಲ್ 60 ರನ್ ಗಳಿಸಿದರು. ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಜೋ ರೂಟ್ 69 ಮತ್ತು ಬೆನ್ ಡಕೆಟ್ 65 ರನ್ ಗಳಿಸಿದರು. ಜೇಮೀ ಓವರ್ಟನ್ 2 ವಿಕೆಟ್ ಪಡೆದರು. ಮೂರನೇ ಏಕದಿನ ಪಂದ್ಯ ಫೆಬ್ರವರಿ 12 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *