ಮೈಸೂರು: ಸ್ವಿಮ್ಮಿಂಗ್ ಪೂಲ್ ವಿವಾದದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ರೋಹಿಣೊ ಸಿಂಧೂರಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಬ್ಯಾಗ್ ಖರೀದಿ ವಿಚಾರದಲ್ಲಿ ರೋಹಿಣಿ ಸಿಂಧೂರಿ ಹೆಸರು ತಗಲಾಕಿಕೊಂಡಿದೆ.
ರೋಹಿಣಿ ಸಿಂಧೂರಿ ಡಿಸಿಯಾಗಿದ್ದಾಗ ಮೈಸೂರಿನಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಬೇಕೆಂದು ಬಟ್ಟೆ ಬ್ಯಾಗ್ ಖರೀದಿ ಮಾಡಿದ್ದರು. ಆ ಬಟ್ಟೆ ಬ್ಯಾಗ್ 10 ರಿಂದ 13 ರೂಪಾಯಿ ಇದ್ದ ಬ್ಯಾಗ್ ಗೆ 50 ರೂಪಾಯಿ ಕೊಟ್ಟು ಖರೀದಿಸಿದ್ದರು ಎಂದು ಶಾಸಕ ಸಾ ರಾ ಮಹೇಶ್ ಆರೋಪ ಮಾಡಿದ್ದರು.
ಇದೀಗ ಆ ಹಗರಣ ಮರು ಜೀವ ಪಡೆದುಕೊಂಡಿದೆ. ಸಾ ರಾ ಮಹೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಗೆ ಡಿಟೈಲ್ ಆಗಿ ಪತ್ರ ಬರೆದಿದ್ದಾರೆ. ಈ ಮೂಲಕ ಈ ಪ್ರಕರಣದ ತನಿಖೆಯನ್ನ ನಡೆಸಲು ಡಿಸಿ ಗೌತಮ್ ಬಗಾದಿಗೆ ಸೂಚಿಸಲಾಗಿದೆ.
ಈ ಹಿಂದೆ ಸಾ ರಾ ಮಹೇಶ್ ಆರೋಪ ಮಾಡಿದಾಗ ರೋಹಿಣಿ ಸಿಂಧೂರಿ ಕೂಡ ಇದರಲ್ಲಿ ಹುರುಳಿಲ್ಲ. ಬಟ್ಟೆ ಬ್ಯಾಗ್ ನೀಡಿದ್ದ ಕೈಮಗ್ಗವೇ ದರ ನಿಗದಿ ಮಾಡಿತ್ತು. ನಾನು ಯಾವುದೇ ಹಣ ತೆಗೆದುಕೊಂಡಿಲ್ಲ ಎಂದಿದ್ದರು.
ಇದೀಗ ಸಾ ರಾ ಮಹೇಶ್ ಪತ್ರದಿಂದ ಮತ್ತೆ ಕೇಸ್ ವಿಚಾರಣೆ ನಡೆಸಲು ಸೂಚನೆ ನೀಡಲಾಗಿದೆ. ಬಟ್ಟೆ ಬ್ಯಾಗ್ ಖರೀದಿಸಲು ನಗರಸಭೆ, ಪುರಸಭೆ, ಮಹಾನಗರಸಭೆಯ ಅನುಮತಿಯನ್ನು ಪಡೆಯದೆ ರೋಹಿಣಿ ಸಿಂಧೂರಿ ಅವರು 14 ಕೋಟಿ ಮೊತ್ತೆಕ್ಕೆ ಆ ಬಟ್ಟೆ ಬ್ಯಾಗ್ ಗಳನ್ನ ಖರೀದಿಸಿದ್ದು ಎಷ್ಟು ಸರಿ ಎಂದು ಶಾಸಕ ಸಾ ರಾ ಮಹೇಶ್ ಪ್ರಶ್ನಿಸಿದ್ದಾರೆ.