ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಾಲಕೃಷ್ಣ ಕರೆ

suddionenews
1 Min Read

ಚಿತ್ರದುರ್ಗ, (ನವೆಂಬರ್. 17) : ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಾಲಕೃಷ್ಣ ವಿದ್ಯಾರ್ಥಿಳಿಗೆ ಕರೆ ನೀಡಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬುಧವಾರ ನೆಹರು ಯುವ ಕೇಂದ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಸಾರಿಗೆ ಇಲಾಖೆ, ಸರ್ಕಾರಿ ಕಲಾ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಯುವ ಜನರಿಗೆ ಹಾಗೂ  ವಿದ್ಯಾರ್ಥಿಗಳಿಗೆ ರಸ್ತೆ ಅಪಘಾತಗಳ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಸುರಕ್ಷತೆಯಿಂದ ವಾಹನ ಚಲಾಯಿಸಬೇಕು. ವಾಹನ ಅಪಘಾತಗಳ ಬಗ್ಗೆ ಜಾರರೂಕವಾಗಿರಬೇಕು ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಗುಡ್ಡದೇಶ್ವರಪ್ಪ ಮಾತನಾಡಿ, ಯುವ ಜನರು ನಮ್ಮ ದೇಶದ ಆಸ್ತಿಯಾಗಿದ್ದು, ತಮ್ಮ ಸುರಕ್ಷತೆಗಾಗಿ ಹಾಗು ತಮ್ಮ ಕುಟುಂಬದವರ ಬಗ್ಗೆ ಕಾಳಜಿ ವಹಿಸಿ ವಾಹನವನ್ನು ಚಲಾಯಿಸಿ ಹಾಗೂ ಅಫಘಾತಗಳನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಯುವ ಜನ ಅಧಿಕಾರಿ ಸುಹಾಸ್ ಎನ್, ರೆಡ್ ಕ್ರಾಸ್ ಕಾರ್ಯದರ್ಶಿಗಳಾದ ಮಜಹರ್ ಉಲ್ಲಾ, ಖಜಾಂಚಿಗಳಾದ ಅರುಣ್ ಕುಮಾರ್, ಗಾಯತ್ರಿ ಶಿವರಾಂ, ಪ್ರೊ.ಅಶ್ವಥ್, ಡಾ.ಬಸವರಾಜ್, ಪ್ರೊ.ನಯಜ್ ಅಹಮದ್ ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *