ಚಿತ್ರದುರ್ಗ, (ಮೇ.25) : ರಾಷ್ಟ್ರೀಯ ಹೆದ್ದಾರಿ 50 (4 ) ರ ದೊಡ್ಡ ಸಿದ್ದವ್ವನಹಳ್ಳಿ ಬಳಿ ಲಾರಿ ಮತ್ತು ಬಸ್ ಡಿಕ್ಕಿಯಾಗಿ ರಸ್ತೆ ಅಪಘಾತ ಸಂಭವಿಸಿದೆ.
ಸಂಜೆ 7 ಗಂಟೆ ಸುಮಾರಿಗೆ ಅಂಡರ್ ಪಾಸ್ ಮೂಲಕ ದೊಡ್ಡಸಿದ್ದವ್ವನಹಳ್ಳಿಗೆ ತೆರಳುತ್ತಿದ್ದ ಬಸ್ ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ.ಬಸ್ ನಲ್ಲಿದ್ದ ಸುಮಾರು 20-25 ಪ್ರಯಾಣಿಕರಿಗೆ ಗಾಯಗಳಾಗಿದ್ದು ಬಸ್ ಡ್ರೈವರ್ ಗೆ ತೀವ್ರ ಪೆಟ್ಟಾಗಿದ್ದು, ಎಲ್ಲರನ್ನೂ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು, ಅಗತ್ಯ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದಲ್ಲಿ ಈವರೆಗೂ ಪ್ರಾಣ ಹಾನಿ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.





GIPHY App Key not set. Please check settings