ದೈವದ ಹರಕೆ ತೀರಿಸಿದ ನಂತರ ಕಾಂತಾರ-2 ಕಥೆ ಬರೆಯಲು ಕೂತ ರಿಷಬ್ : ಇದು ಮುಂದುವರೆದ ಭಾಗವಲ್ಲ..!

1 Min Read

ಕೆಜಿಎಫ್ ಬಳಿಕ ಇಡೀ ದೇಶವೇ ಮತ್ತೆ ಕನ್ನಡ ಇಂಡಸ್ಟ್ರಿಯತ್ತ ತಿರುಗಿ ನೋಡುವಂತೆ ಮಾಡಿದ್ದು ʻಕಾಂತಾರʼ ಸಿನಿಮಾ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಈ ಸಿನಿಮಾಗೆ ಹೊಂಬಾಳೆ ಫಿಲಂಸ್ ಬ್ಯಾನರ್ 16 ಕೋಟಿ ಖರ್ಚು ಮಾಡಿ ಸಿನಿಮಾ ನಿರ್ಮಾಣ ಮಾಡಿತ್ತು. ಆದ್ರೆ ಸಿನಿಮಾ 400 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರ-2 ಬಗ್ಗೆ ಅತ್ಯಂತ ಪ್ರಮುಖವಾದ ಸುದ್ದಿಯೊಂದು ಸಿಕ್ಕಿದೆ.

ಕರಾವಳಿಯ ಆಚರಣೆ, ದೈವಗಳ ಶಕ್ತಿ, ಕಾಡು ಜನರ ಸಮಸ್ಯೆ ಹೀಗೆ ಅನೇಕ ವಿಚಾರಗಳ ಮೇಲೆ ಸಿನಿಮಾವನ್ನು ತೆಗೆದುಕೊಂಡು ಹೋಗಲಾಗಿತ್ತು. ಸಿನಿಮಾ ಮೊದಲಿಗೆ ಇದ್ದದ್ದು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡುವ ಪ್ಲ್ಯಾನ್, ಆದರೆ ಅದಕ್ಕೆ ಸಿಕ್ಕ ರೆಸ್ಪಾನ್ಸ್ ಹೇಗಿತ್ತು ಅಂದ್ರೆ ಹದಿನೈದು- ಇಪ್ಪತ್ತು ದಿನಗಳ ಗ್ಯಾಪ್ ನೊಂದಿಗೆ ಬೇರೆ ಬೇರೆ ಭಾಷೆಯಲ್ಲೂ ಬಿಟ್ಟಾಗಲೂ ಹಿಟ್ ಆಗಿತ್ತು.

ಕಾಂತಾರ ಸಿನಿಮಾ ಹಿಟ್ ಆದಮೇಲೆ ಪಾರ್ಟ್ 2 ಬರುತ್ತಾ ಎಂದು ಹಲವರು ಕೇಳಿದ್ದರು. ಈಗ ಅದಕ್ಕೂ ದೈವ ಅಸ್ತು ಎಂದಿದೆ ಎನ್ನಲಾಗಿದೆ. ಹೀಗಾಗಿ ರಿಷಬ್ ಶೆಟ್ಟಿ ಸದ್ಯ ಭಾಗ 2ರ ಕಥೆ ಬರೆಯುವುದಕ್ಕೆ ಆರಂಭಿಸಿದ್ದಾರೆ. ಈ ಬಗ್ಗೆ ವಿಜಯ್ ಕಿರಗಂದೂರು ಮಾಹಿತಿ ನೀಡಿದ್ದು, ಸಿನಿಮಾ ಶೂಟಿಂಗ್ ಗೆ ಮಳೆಗಾಲದ ಅವಶ್ಯಕತೆ ಇದೆ. ಹೀಗಾಗಿ ಜೂನ್ ನಲ್ಲಿ ಸಿನಿಮಾ ಆರಂಭವಾಗಲಿದೆ. 2024ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದಿದ್ದಾರೆ.

ಇನ್ನು ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಎಲ್ಲರಿಗೂ ಗೊತ್ತೆ ಇದೆ. ಕಾಡುಬೆಟ್ಟದ ಶಿವ ಕೊನೆಯಲ್ಲಿ ತಂದೆಯಂತೆ ಕಾಡಿನ ನಡುವೆ ಓಡಿ ಹೋಗುತ್ತಾನೆ. ಶಿವನ ಹೆಂಡತಿ ಆಗ ಗರ್ಭೀಣಿ. ಆ ಮಗುವಿನ ಮೇಲೆಯೇ ಕ್ಯಾಮೆರಾ ಫೋಕಸ್ ಆಗುತ್ತೆ.

ಭಾಗ2ರಲ್ಲಿ ಈ ಕಥೆ ಮುಂದುವರೆಯಬಹುದಾ ಎಂಬೆಲ್ಲಾ ಊಹೆಗಳು ಆರಂಭವಾಗಿತ್ತು. ಆದರೆ ಈ ಕಥೆ ಮುಂದುವರೆಯುವುದಿಲ್ಲ. ಅದರ ಬದಲಿಗೆ ಕಥೆ ಸ್ವಲ್ಪ ಹಿಂದಕ್ಕೆ ಹೋಗುತ್ತಂತೆ. ಪಂಜುರ್ಲಿ ದೈವ, ರಾಜನರಾಜನ ಕದನ ಹೀಗೆ ಕಾಡುಬೆಟ್ಟದ ಶಿವನ ತಂದೆಯ ಕಾಲದಲ್ಲಿ ನಡೆದ ಘಟನೆಯನ್ನು ಕಾಂತಾರ-2 ಸಿನಿಮಾದಲ್ಲಿ ತರಲಾಗುತ್ತಂತೆ.

Share This Article
Leave a Comment

Leave a Reply

Your email address will not be published. Required fields are marked *