ʻಕಿರಿಕ್ ಪಾರ್ಟಿʼ ಹೆಸರೇಳದೆ ಸನ್ನೆ ಮಾಡಿದ್ದ ರಶ್ಮಿಕಾಗೆ, ಅದೇ ಸನ್ನೆಯಿಂದ ಉತ್ತರ ಕೊಟ್ಟರು ರಿಷಬ್ : ಟ್ರೋಲಿಗರು ಫುಲ್ ಖುಷಿ..!

1 Min Read

 

ರಶ್ಮಿಕಾ ಮಂದಣ್ಣ ಇಂದು ನ್ಯಾಶನಲ್ ಕ್ರಶ್ ಆಗಿದ್ದಾರೆ ಎಂದರೆ ಅದಕ್ಕೆ ಕಾರಣ ಕಿರಿಕ್ ಪಾರ್ಟಿ ಸಿನಿಮಾ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾಗೆ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದರು. ರಿಷಬ್ ಶೆಟ್ಟಿ ತಮ್ಮ ಸಿನಿಮಾಗಳಿಗೆ ಆಲ್ಮೋಸ್ಟ್ ಹೊಸ ನಟಿಯರನ್ನೇ ಹುಡುಕುತ್ತಾರೆ. ಅದೇ ರೀತಿ ಕಿರಿಕ್ ಪಾರ್ಟಿ ಸಿನಿಮಾಗೂ ಹೊಸ ನಟಿಯ ಹುಡುಕಾಟದಲ್ಲಿದ್ದಾಗ ರಶ್ಮಿಕಾ ಮಂದಣ್ಣ ಕಣ್ಣಿಗೆ ಬಿದ್ದಿದ್ದರು.

ದೊಡ್ಡ ಕನ್ನಡಕವನ್ನು ಹಾಕಿ, ಸಾನ್ವಿ ಹೆಸರನ್ನಿಟ್ಟು ಕಿರಿಕ್ ಪಾರ್ಟಿ ಮಾಡಿದರು. ಸಿನಿಮಾವೂ ಗೆದ್ದಿತು, ಸಾನ್ವಿಯೂ ಫೇಮಸ್ ಆದರೂ. ಬಳಿಕ ಬ್ಯಾಕ್ ಟು ಬ್ಯಾಕ್ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು. ಹೀಗೆ ನಟಿಸುತ್ತಿರಲಿ ಎಂದು ಹಾರೈಸಿದ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿಯೇ ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡಿದ್ದರು. ಆದ್ರೆ ಅದ್ಯಾವಾಗ ತೆಲುಗು ಸಿನಿಮಾದಲ್ಲಿ ಆಫರ್ ಬಂತೋ ಅಲ್ಲಿಂದ ಇಲ್ಲಿಯ ತನಕ ಕನ್ನಡ ಅಂದ್ರೆ ಯಾವ ಭಾಷೆ ಅದು ಅನ್ನೋ ಲೆವೆಲ್ ಗೆ ರಶ್ಮಿಕಾ ನಡೆದುಕೊಳ್ಳುತ್ತಾರೆ. ಇದು ಕನ್ನಡಿಗರು ಅತಿಯಾದ ಕೋಪ ತರಿಸುವಂತೆ ಮಾಡಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾದ ಬಗ್ಗೆ ಹೇಳಿ ಎಂದಾಗ ಕಿರಿಕ್ ಪಾರ್ಟಿ ಹೆಸರನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಕೆ ಮಾಡಿದರು. ಕೈ ಸನ್ನೆಯಲ್ಲಿ ತೋರಿಸಿದರು. ಬಳಿಕ ನಾನು ಕಾಲೇಜಿನಲ್ಲಿ ಓದುತ್ತಿರುವಾಗ ಕಿರಿಕ್ ಪಾರ್ಟಿ ಸಿನಿಮಾ ಟೀಂ ಬಂದು ನನ್ನನ್ನು ನಟಿಸುವಂತೆ ಕೇಳಿಕೊಂಡಿತು ಎಂದಿದ್ದಾರೆ.

ಇದೀಗ ಕಾಂತಾರ ಸಿನಿಮಾ ಸಕ್ಸಸ್ ನಲ್ಲಿರುವ ರಿಷಬ್ ಶೆಟ್ಟಿಯನ್ನು ಬೇರೆ ಬೇರೆ ಭಾಷೆಯವರು ಸಂದರ್ಶನ ಮಾಡುತ್ತಿದ್ದಾರೆ. ಗುಲ್ಟು ಡಾಟ್ ಕಾಮ್ ಎಂಬ ಯೂಟ್ಯೂಬರ್ ರಿಷಬ್ ಶೆಟ್ಟಿಯನ್ನು ಸಂದರ್ಶನ ಮಾಡಿದ್ದಾರೆ. ಆಗ ರಶ್ಮಿಕಾ, ಕೀರ್ತಿ, ಸಮಂತಾ, ಸಾಯಿಪಲ್ಲವಿ ಯಾರಿಷ್ಟ..? ಯಾರ ಜೊತೆಗೆ ನಟಿಸಲು ಇಷ್ಟಪಡುತ್ತೀರಿ ಎಂದಾಗ ರಿಷಬ್ ಶೆಟ್ಟಿ, ಸಾಯಿ ಪಲ್ಲವಿ ಹಾಗೂ ಸಮಂತಾ ನಟನೆ ನನಗೆ ತುಂಬಾ ಇಷ್ಟ. ಈ ರೀತಿಯ ನಟಿಯರ ಜೊತೆ ನಟಿಸಲು ಇಷ್ಟವಿಲ್ಲ ಎಂದು ರಿಷಬ್ ಶೆಟ್ಟಿ, ರಶ್ಮಿಕಾ ಮಾಡಿದ್ದ ರೀತಿಯೇ ಆಕ್ಷನ್ ಮಾಡಿ ತೋರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *