ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷ ನಿಧನದ ಬಳಿಕ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಹಜ ಸ್ಥಿತಿಯತ್ತ ಸದ್ಯಕ್ಕೆ ಜಿಲ್ಲೆ ಮರಳುತ್ತಿದ್ದರು, ಆತಂಕದ ವಾತಾವರಣ ಹಾಗೆಯೇ ಇದೆ. ಮುಂಜಾಗ್ರತ ಕ್ರಮವಾಗಿ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ಹೀಗಾಗಿಯೇ ಡ್ರೋನ್ ಮೂಲಕ ಎಚ್ಚರಿಕೆ ವಹಿಸಿದ್ದಾರೆ.
ನಗರದ ಪ್ರಮುಖ ಭಾಗಗಳಲ್ಲಿ ಇಂದು ಡ್ರೋನ್ ಹಾರಾಟ ನಡೆಸುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳದಿಂದ 5 ಜನರ ತಂಡ ಈ ಡ್ರೋನ್ ಕ್ಯಾಮೆರಾವನ್ನ ನಿರ್ವಹಣೆ ಮಾಡಲಿದ್ದಾರೆ. ಈ ಡ್ರೋನ್ ಕ್ಯಾಮೆರಾವನ್ನ ಮೊದಲ ಬಾರಿಗೆ ಶಿವಮೊಗ್ಗದ ಬಸ್ ನಿಲ್ದಾಣದ ಅಶೋಕ ವೃತ್ತದಲ್ಲಿ ಬಳಕೆ ಮಾಡಲಾಗಿದೆ.
ಐನೂರು ಮೀಟರ್ ಎತ್ತರದಲ್ಲಿ ಹಾರುವ ಈ ಡ್ರೋನ್, ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸತತ ಕಾರ್ಯಾಚರಣೆ ನಡೆಸಲಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈ ಡ್ರೋನ್ ಕರ್ತವ್ಯ ನಿರ್ವಹಿಸಲಿದೆ.