Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆರ್‌ಎಸ್‌ಎಸ್ ನಿಂದ ಸಿಎಂ ಗದ್ದುಗೆ ವರೆಗೂ ರೇವಂತ್ ರೆಡ್ಡಿ ನಡೆದು ಬಂದ ದಾರಿ

Facebook
Twitter
Telegram
WhatsApp

ಸುದ್ದಿಒನ್, ಹೈದರಾಬಾದ್ : ಅನುಮುಲ ರೇವಂತ್ ರೆಡ್ಡಿ ಈ ಹೆಸರು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ತೆಲಂಗಾಣ ರಾಜ್ಯ ಉದಯವಾದ ನಂತರ ಎಲ್ಲೋ ಕಳೆದು ಹೋಗಿದ್ದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ರೇವಂತ್ ರೆಡ್ಡಿಯವರ ಪಾತ್ರ ಬಹುಮುಖ್ಯವಾಗಿತ್ತು.

TPCC ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ರೇವಂತ್ ಅತ್ಯಂತ ಆಕ್ರಮಣಕಾರಿಯಾಗಿ BRS ಸರ್ಕಾರದ ವಿರುದ್ಧ ಹೋರಾಡಿದರು. ಸಿಎಂ ಕೆಸಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿಯೇ ತೀರುತ್ತೇವೆ ಎಂದು ಶಪಥ ಮಾಡಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಪಕ್ಷ ಸಿದ್ಧವಾಗಿದೆ. ಈ ವೇಳೆ ರೇವಂತ್ ರೆಡ್ಡಿ ಸಿಎಂ ಸ್ಥಾನದ ರೇಸ್‌ನಲ್ಲಿದ್ದಾರೆ.

ರೇವಂತ್ ರೆಡ್ಡಿ ಅವರ ರಾಜಕೀಯ ಪಯಣ :  ನವೆಂಬರ್ 08, 1969 ರಂದು ಮೆಹಬೂಬ್ ನಗರ ಜಿಲ್ಲೆಯ ಕೊಂಡರೆಡ್ಡಿ ಪಲ್ಲಿಯ ವಂಗೂರಿನಲ್ಲಿ ಜನಿಸಿದರು. ಅವರದು ಕೃಷಿ ಕುಟುಂಬ. ತಂದೆ ಅನುಮುಲ ನರಸಿಂಹ ರೆಡ್ಡಿ, ತಾಯಿ ಅನುಮುಲಾ ರಾಮಚಂದ್ರಮ್ಮ.

ಬಾಲ್ಯದಿಂದಲೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ರೇವಂತ್ ಪದವಿಯ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ವಿಭಾಗದಲ್ಲಿ ಕೆಲಸ ಮಾಡಿದ್ದರು. ರೇವಂತ್ ಎವಿ ಕಾಲೇಜಿನಲ್ಲಿ ಪದವಿ ಪೂರೈಸಿದ್ದಾರೆ.
1992 ರಲ್ಲಿ ಅವರು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಅವರ ಸಹೋದರನ ಮಗಳು ಗೀತಾ ರೆಡ್ಡಿ ಅವರನ್ನು ವಿವಾಹವಾದರು. ರೇವಂತ್ ಮತ್ತು ಗೀತಾ ದಂಪತಿಗೆ ನೈಮಿಷಾ ರೆಡ್ಡಿ  ಒಬ್ಬಳೇ ಮಗಳು.

2004 ರಲ್ಲಿ ತೆಲುಗು ದೇಶಂ ಪಕ್ಷಕ್ಕೆ ಸೇರಿದ ರೇವಂತ್ ರೆಡ್ಡಿ. 2006 ರಲ್ಲಿ, ಮಹಬೂಬ್ ನಗರ ಜಿಲ್ಲೆಯ ಮಿಡ್ಜೆಲ್ ZPTC ಯಾಗಿ ಸ್ಪರ್ಧಿಸಲು ಟಿಡಿಪಿಯಿಂದ ತಿರಸ್ಕರಿಸಲ್ಪಟ್ಟ ನಂತರ ರೇವಂತ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆ ಕಾಲದಲ್ಲೇ ಸಂವೇದನಾಶೀಲ ನಾಯಕರಾಗಿ ಸುದ್ದಿಯಾಗಿದ್ದರು. ಮತ್ತೆ 2008ರಲ್ಲಿ ಅಂದಿನ  ಆಂಧ್ರಪ್ರದೇಶ ವಿಧಾನ ಪರಿಷತ್ತಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂಎಲ್ಸಿಯಾಗಿ ಗೆದ್ದರು. ನಂತರ ಟಿಡಿಪಿ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಮುಂದಿನ ವರ್ಷ ಅಂದರೆ 2009 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಕೊಡಂಗಲ್ ಕ್ಷೇತ್ರದಿಂದ ವಿಧಾನಸಭೆಗೆ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

ಮತ್ತೆ 2014ರಲ್ಲಿ ಆಂಧ್ರಪ್ರದೇಶ ವಿಭಜನೆಯ ನಂತರ ತೆಲಂಗಾಣದ ಕೊಡಂಗಲ್ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರು. ಟಿಟಿಡಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.

2015ರಲ್ಲಿ ತೆಲಂಗಾಣ ವಿಧಾನ ಪರಿಷತ್ ಚುನಾವಣೆ ವೇಳೆ ಟಿಡಿಪಿ ಅಭ್ಯರ್ಥಿ ಪರವಾಗಿ ಮತ ಹಾಕಲು ರೇವಂತ್ ರೆಡ್ಡಿಯವರು ನಾಮನಿರ್ದೇಶಿತ ಶಾಸಕ ಸ್ಟೀಫನ್‌ಸನ್‌ಗೆ ಲಂಚ ನೀಡಿದ್ದರು ಎಂಬ ಸ್ಟಿಂಗ್-ಆಪರೇಷನ್ ವಿಡಿಯೋ ಸೇರಿದಂತೆ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅವರನ್ನು ಬಂಧಿಸಿತ್ತು. 45ಕ್ಕೂ ಹೆಚ್ಚು ದಿನ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ರೇವಂತ್ ರೆಡ್ಡಿ ಅವರು 2017ರ ಅಕ್ಟೋಬರ್‌ನಲ್ಲಿ ಟಿಡಿಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಂತರ 2018ರಲ್ಲಿ ಟಿಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಆ ನಂತರ ಅವರು ಡಿಸೆಂಬರ್ 2018 ರ ವಿಧಾನಸಭಾ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿ ಸೋತರು. ಮೇ 2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರವಾಗಿ ಮಲ್ಕಾಜಿಗಿರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಸ್ಪರ್ಧಿಸಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 26 ಜೂನ್ 2021 ರಂದು ತೆಲಂಗಾಣ ಪಿಸಿಸಿ ಅಧ್ಯಕ್ಷರಾಗಿ ರೇವಂತ್ ರೆಡ್ಡಿಯನ್ನು ನೇಮಿಸಿತು.

ಅವರು ಜುಲೈ 7, 2021 ರಂದು ತೆಲಂಗಾಣ ರಾಜ್ಯ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ಮಾಣಿಕ್ಯಂ ಟ್ಯಾಗೋರ್ ಅವರ ಸಮ್ಮುಖದಲ್ಲಿ TPCP ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮತ್ತು ಈ ಬಾರಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಕೊಡಂಗಲ್ ಮತ್ತು ಕಾಮರೆಡ್ಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಇದಾದ ಬಳಿಕ ಹಿರಿಯ ಕಿರಿಯರನ್ನೊಳಗೊಂಡ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದ ರೇವಂತ್ 2023ರ ವಿಧಾನಸಭಾ ಚುನಾವಣೆಗೆ ಅಬ್ಬರದ ಪ್ರಚಾರ ನಡೆಸಿದ್ದರು. ಬಿಆರ್ ಎಸ್ ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸುತ್ತಾ ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ವ್ಯವಸ್ಥಿತವಾಗಿ ಜನರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಅಲೆ ಬರುವಂತೆ ಚುನಾವಣಾ ರಣತಂತಂತ್ರವನ್ನು ಹೆಣೆದು ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆದರೆ ಅಂತಿಮವಾಗಿ ತೆಲಂಗಾಣ ವಿಧಾನಸಭೆ ಚುನಾವಣೆ 2023 ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿ ದಾಖಲೆ ನಿರ್ಮಿಸಿದೆ. ಈ ಯಶಸ್ಸಿನಲ್ಲಿ ಟಿಪಿಸಿಸಿ ಅಧ್ಯಕ್ಷ ಅನುಮೂಲ ರೇವಂತ್ ರೆಡ್ಡಿ ಅವರ ಪಾತ್ರ ಪ್ರಮುಖವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!